ನುಡಿದಂತೆ ನಡೆದ ಮಾಜಿ ಜಿ.ಪಂ ಸದಸ್ಯ ಅಬ್ದುಲ್ ಲತೀಫ್: ಬೈರಜ್ಜಿಗೆ ಮನೆಯ ಭಾಗ್ಯ

Jan 2, 2026 - 21:48
Jan 2, 2026 - 21:49
 0  633
ನುಡಿದಂತೆ ನಡೆದ ಮಾಜಿ ಜಿ.ಪಂ ಸದಸ್ಯ ಅಬ್ದುಲ್ ಲತೀಫ್:  ಬೈರಜ್ಜಿಗೆ ಮನೆಯ ಭಾಗ್ಯ

ಮಡಿಕೇರಿ:ಗರಗಂದೂರಿನಲ್ಲಿ ಮನೆ ಕಳೆದುಕೊಂಡಿದ್ದ ವೃದ್ಧೆ ಬೈರಿ ಗೆ ಇದೀಗ ಮನೆಯ ಭಾಗ್ಯ ಸಿಕ್ಕಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಸಮಾಜ ಸೇವಕ ಪಿ. ಎಂ. ಲತೀಫ್ ಅವರು ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದರು.ಇದೀಗ ಲತೀಫ್ ಅವರು ನುಡಿದಂತೆ ನಡೆದಿದ್ದಾರೆ.

 ಈ ಹಿಂದೆ ಬೈರಜ್ಜಿಗೆ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಕೆ ಜೀವನ ನಡೆಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ವೀಡಿಯೋ ನೋಡಿ ತಕ್ಷಣ ಸ್ಪಂದಿಸಿದ ಅಬ್ದುಲ್ ಲತೀಫ್ ಅವರು ಶಾಸಕ ಡಾ.ಮಂತರ್ ಗೌಡ ಸಹಕಾರದಿಂದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದರು. ಇದೀಗ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರಿಂದ ಇಂದು ಬೈರಿ ಮನೆ ಉದ್ಘಾಟನೆ ಮಾಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0