ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಕೊಟ್ಟಮುಡಿ ಹಂಸ ಅವರ ಮಗ ಭಾಗಿಯಾಗಿದ್ದಾರೆ ಎಂಬ ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರ ಹೇಳಿಕೆ ಸತ್ಯಕ್ಕೆ ದೂರ;ಎಚ್.ಹಂಸ ಕೊಟ್ಟಮುಡಿ

Feb 28, 2026 - 14:22
Feb 28, 2026 - 15:09
 0  1.7k
ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಕೊಟ್ಟಮುಡಿ ಹಂಸ ಅವರ ಮಗ ಭಾಗಿಯಾಗಿದ್ದಾರೆ ಎಂಬ  ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರ ಹೇಳಿಕೆ ಸತ್ಯಕ್ಕೆ ದೂರ;ಎಚ್.ಹಂಸ ಕೊಟ್ಟಮುಡಿ
ಹಂಸ ಕೊಟ್ಟಮುಡಿ

ಮಡಿಕೇರಿ; ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣ ಖಂಡನೀಯವಾಗಿದ್ದು,ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಕೊಟ್ಟಮುಡಿ ಹಂಸ ಅವರ ಮಗ ಭಾಗಿಯಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರ ಹೇಳಿಕೆ ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ಮಡಿಕೇರಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕೊಟ್ಟಮುಡಿ ಹಂಸ ಅವರು,ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ ಅವರು ಖಾಸಗಿ ವಾಹಿನಿಗಳಿಗೆ ಹೇಳಿಕೆ ನೀಡುವಾಗ ನಾಪೋಕ್ಲು ಹಲ್ಲೆ ಪ್ರಕರಣದಲ್ಲಿ ಕೊಟ್ಟಮುಡಿ ಹಂಸ ಅವರ ಮಗ ಭಾಗವಹಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದು,ಮಾಜಿ ಶಾಸಕರು ಮೊದಲು ವಿಷಯವನ್ನು ಸಂಪೂರ್ಣ ತಿಳಿದ ನಂತರ ಹೇಳಿಕೆ ನೀಡಬೇಕು ಹೊರತು, ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯೊಬ್ಬರ ತಂದೆಯ ಹೆಸರು ಹಂಸ ಎಂದಾಗಿದೆ. ಆದರೆ ವಿಷಯವನ್ನು ಸಂಪೂರ್ಣವಾಗಿ ತಿಳಿಯದೆ ಮಾಜಿ ಶಾಸಕರಾದ ಕೆಜಿ ಬೋಪಯ್ಯ ಅವರು ಹೇಳಿಕೆ ನೀಡಿದ್ದಾರೆ.

 ಮಾಜಿ ಶಾಸಕರ ಹೇಳಿಕೆ ನೋಡಿ ನೂರಾರು ಮಂದಿ ನನಗೆ ಕರೆ ಮಾಡಿ ವಿಷಯದ ಬಗ್ಗೆ ಮಾತನಾಡಿದ್ದಾರೆ.ವಿಷಯ ಕೇಳಿ ನಾನೇ ಶಾಕ್ ಆಗಿದ್ದೇನೆ. ನನ್ನ ದೊಡ್ಡ ಮಗ ದುಬೈನಲ್ಲಿದ್ದಾನೆ. ಇನ್ನೊಬ್ಬ ಮಗ ಶಾಲಾ ವಿದ್ಯಾರ್ಥಿಯಾಗಿದ್ದಾನೆ.

ಎಲ್ಲಾ ಜಾತಿ,ಧರ್ಮಗಳೊಂದಿಗೆ ಸೌಹಾರ್ದತೆಯುತವಾಗಿ ಜೀವನ ನಡೆಸಿ ಎಲ್ಲಾ ಧರ್ಮಗಳ ಆಚಾರ,ವಿಚಾರಗಳನ್ನು ಗೌರವಿಸುತ್ತಾ ಬಂದಿರುವ ವ್ಯಕ್ತಿ ನಾನು.ಮಾಜಿ ಶಾಸಕರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಯಾರು ಕೂಡ ಅಪಪ್ರಚಾರಕ್ಕೆ ಕಿವಿಕೊಡಬಾರದು.ಅದಲ್ಲದೇ ನಾಪೋಕ್ಲು ಹಲ್ಲೆ ಪ್ರಕರಣದಲ್ಲಿ ಕೊಟ್ಟಮುಡಿಯ ಯಾರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಯಾರ ಕೂಡ ಶಾಂತಿಗೆ ಭಂಗವುಂಟಾಗುವ ರೀತಿಯಲ್ಲಿ ವರ್ತಿಸಬಾರದೆಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ ತಿಳಿಸಿದ್ದಾರೆ.

What's Your Reaction?

Like Like 4
Dislike Dislike 0
Love Love 3
Funny Funny 2
Angry Angry 3
Sad Sad 1
Wow Wow 1