ನಾಪೋಕ್ಲುವಿನಲ್ಲಿ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಪ್ರಯುಕ್ತ ಸೌಹಾರ್ದ ಕ್ರೀಡಾಕೂಟ

Nov 25, 2025 - 11:20
 0  350
ನಾಪೋಕ್ಲುವಿನಲ್ಲಿ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಪ್ರಯುಕ್ತ ಸೌಹಾರ್ದ ಕ್ರೀಡಾಕೂಟ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆ ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಪ್ರಯುಕ್ತ ಪ್ರಥಮ ಬಾರಿಗೆ ಸರ್ವಧರ್ಮದವರಿಗಾಗಿ ಆಯೋಜಿಸಲಾದ ಸೌಹಾರ್ದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ಸಿದ್ದಾಪುರ ನಲ್ವತ್ತೇಕರೆ ಗ್ಯಾಲಕ್ಸಿ ತಂಡ ಹಾಕತ್ತೂರಿನ ಅಟ್ಯಾಕ್ ಬಾಯ್ಸ್ ತಂಡವನ್ನು ಮಣಿಸಿ 33,333 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಪಡೆದ ಹಾಕತೂರಿನ ಅಟ್ಯಾಕ್ ಬಾಯ್ಸ್ ತಂಡ 15,555ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು. ತೃತೀಯ ಬಹುಮಾನವನ್ನು ಕೊಂಡಂಗೇರಿ ಹಾಗೂ ಅಯ್ಯಂಗೇರಿ ತಂಡ ಪಡೆದುಕೊಂಡರು.

 ಕ್ರೀಡಾ ಪ್ರೇಮಿಗಳ ಆಕರ್ಷಣೆಯಾದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್ ಪಂದ್ಯಾಟದಲ್ಲಿ ಈಶ್ವರ ಇಗ್ಗುತ್ತಪ್ಪ ತಂಡ ಹಿಂದೂ ಮಲಯಾಳಿ ಸಂಘದ ಕಾರ್ಗಿಲ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ವಿಜೇತ ಈಶ್ವರ ಇಗ್ಗುತ್ತಪ್ಪ ತಂಡಕ್ಕೆ 30ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಹಿಂದೂ ಮಲಯಾಳಿ ಸಂಘದ ಕಾರ್ಗಿಲ್ ತಂಡಕ್ಕೆ 15ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು. ಮಹಿಳೆಯರ ಫೈನಲ್ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಚೇರಂಬಾಣೆಯ ಗೌಡ ಸಮಾಜ ಒಕ್ಕೂಟ ತಂಡ ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿ 15ಸಾವಿರ ನಗದು ಹಾಗೂ ಆಕರ್ಷಕ ಟ್ರೂಪಿಯನ್ನು ಪಡೆದುಕೊಂಡಿತು.

 ದ್ವಿತೀಯ ಸ್ಥಾನ ಪಡೆದ ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ ತಂಡ 10ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಪಡೆದುಕೊಂಡರು. ಫೈನಲ್ ಕ್ರೀಡಾಕೂಟವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ಉದ್ಘಾಟಿಸಿದರು. ಬಳಿಕ ವಿಜೇತ ತಂಡಗಳಿಗೆ ಹಾಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಿದರು.

ಈ ಸಂದರ್ಭ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಅಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು, ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0