ಕೊಡಗು ಕಾಂಗ್ರೆಸ್ ನಿಂದ ಸಂವಿಧಾನ ದಿನಾಚರಣೆ

Nov 26, 2025 - 12:20
Nov 26, 2025 - 13:33
 0  121
ಕೊಡಗು ಕಾಂಗ್ರೆಸ್ ನಿಂದ ಸಂವಿಧಾನ ದಿನಾಚರಣೆ

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಕೊಡಗು ಜಿಲ್ಲಾ ಕಾಂಗ್ರೆಸ್ ಹಿರಿಯ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ರವರು ಅಧ್ಯಕ್ಷತೆ ವಹಿಸಿ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು. ಕೊಡಗು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರು ಸಂವಿಧಾನದ ಆಶಯಗಳ ಬಗ್ಗೆ ವಿವರಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಸಂವಿಧಾನದ ಪೀಠಿಕೆಯನ್ನು ವಾಚಿಸಿ ಸಾಮೂಹಿಕ ಪ್ರತಿಜ್ಞಾ ವಿಧಿ ಬೋದಿಸಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್ , ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ರವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಕೆ.ಜೆ.ಪೀಟರ್, ಜುಲೇಕಾಬಿ,ರವೂಫ್ ಎಂ.ಎನ್, ಮೋಹನ್ ವಿ.ಜಿ, ಶಾಫಿ ಎಡಪಾಲ,ಮಂಡಿರ ಸದಾ ಮುದ್ದಪ್ಪ, ಮುದ್ದುರಾಜ್,ಮೀನಾಜ್ ಪ್ರವೀಣ್,ಲೀಲಾ ಶೇಷಮ್ಮ,ಹರಿಣಿ,ಹರಿ ಪ್ರಸಾದ್ ಕೋಚನ, ವಿಮಲ, ಶ್ರೀಮತಿ ಶಶಿ,ಮಮ್ತಾಜ್ ಬೇಗಂ, ಫ್ಯಾನ್ಸಿ ಪಾರ್ವತಿ,ಮೋಹನ್ ರಾಜ್ ಕೇಟೋಳಿ,ಕೋಡಿರ ವಿನೋದ್, ಆದಂ, ರಿಯಾಸ್ಸುದ್ದೀನ್,ಸೇರಿದಂತೆ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0