ಮನರೇಗಾ ಯೋಜನೆಗಿಂತ ಜಿ.ರಾಮ್.ಜಿ ಉತ್ತಮ ಯೋಜನೆ:ಮಾಜಿ ಸಂಸದ ಪ್ರತಾಪ್ ಸಿಂಹ

Jan 8, 2026 - 16:23
 0  222
ಮನರೇಗಾ ಯೋಜನೆಗಿಂತ ಜಿ.ರಾಮ್.ಜಿ ಉತ್ತಮ ಯೋಜನೆ:ಮಾಜಿ ಸಂಸದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಮಡಿಕೇರಿ: ಕೇಂದ್ರ ಸರ್ಕಾರದ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ಗೆ ಕರ್ನಾಟಕ ರಾಜ್ಯ ಸರ್ಕಾರ ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯದಲ್ಲಿ ತಕರಾರು ಎತ್ತಿದೆ ಎಂದು ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಮನೆರಗಾ ಯೋಜನೆಗೆ ಹೋಲಿಸಿದ್ದಲ್ಲಿ ವಿಜಿ ಜಿ ರಾಮ್ ಜಿ ಉತ್ತಮ ಯೋಜನೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಆರಂಭ ಮಾಡಲಾಗಿತ್ತು. ಆದರೆ ಈ ಯೋಜನೆಯಲ್ಲಿ ದುರುಪಯೋಗಕ್ಕೆ ಸಾಕಷ್ಟು ಅವಕಾಶವಿತ್ತು. ಆದರೆ, ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಕಾಮಗಾರಿಯಲ್ಲಿ ತೊಡಗುವವರ ಛಾಯಾಚಿತ್ರ ತೆಗೆಯಬೇಕಾಗುತ್ತದೆ. ಮತ್ತು ವಾರದ ಲೆಕ್ಕ ನೀಡಬೇಕು. ಜತೆಗೆ ಸಕಾಲದಲ್ಲಿ ಆಡಿಟಿಂಗ್ ನಡೆಸಬೇಕಾಗುತ್ತದೆ. ಆದ್ದರಿಂದ ದುರುಪಯೋಗ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಎಲ್ಲಾ ರಾಜ್ಯದಲ್ಲಿಯೂ ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಜಾರಿಗೊಳಿಸದೇ ತಕಾರರು ತೆಗೆದಿದೆ ಎಂದು ಅಸಾಮಾಧನ ವ್ಯಕ್ತಪಡಿಸಿದರು.

ಮನರೆಗಾದಲ್ಲಿದ್ದ 100 ದಿನ ಕೆಲಸದ ದಿನಗಳನ್ನು ವಿಜಿ ಜಿ ರಾಮ್ ಜಿಯಲ್ಲಿ 125 ದಿನಗಳಿಗೆ ಏರಿಸಲಾಗಿದೆ. 266 ಕಾಮಗಾರಿಗಳನ್ನು ಕಾಮಗಾರಿಗಳನ್ನು ಸೃಷ್ಟಿ ಮಾಡಲಿದ್ದು, ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ಸರಕಾರ ಯೋಜನೆಯನ್ನು ತಯಾರು ಮಾಡಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಮತ್ತು ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0