ಪ್ರಜಾಪ್ರಭುತ್ವ ಉಳಿವಿಗಾಗಿ ಮತ್ತೊಂದು ಹೋರಾಟಕ್ಕೆ ಸಿದ್ದರಾಗಿ; ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಭೋಸರಾಜ್ ಕರೆ

ಪ್ರಜಾಪ್ರಭುತ್ವ ಉಳಿವಿಗಾಗಿ ಮತ್ತೊಂದು ಹೋರಾಟಕ್ಕೆ ಸಿದ್ದರಾಗಿ;  ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಭೋಸರಾಜ್ ಕರೆ

ಮಡಿಕೇರಿ;ಭಾರತದ ಸ್ವಾತಂತ್ರ್ಯ ಕ್ಕಾಗಿ ಯಾವ ರೀತಿ ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ದ ಹೋರಾಟ ನಡೆಸಿತ್ತೊ ಅದೇ ರೀತಿಯಲ್ಲಿ ಪ್ರಜಾಪ್ರಭುತ್ವ ದ ಉಳಿವಿಗಾಗಿ ಮತ್ತೊಂದು ಹೋರಾಟವನ್ನು ಬಿಜೆಪಿ ವಿರುದ್ದ ನಡೆಸಲು ಸಿದ್ದರಾಗಿ ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್.ಬೋಸರಾಜ್ ರವರು ಕರೆ ನೀಡಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿ ರಾಮ್ ಜಿ ಯೋಜನೆಯಾಗಿ ಬದಲಾಯಿಸಿದ ಕೇಂದ್ರ ಸರ್ಕಾರದ ವಿರುದ್ದ ಕೆಪಿಸಿಸಿ ಮಾರ್ಗಸೂಚಿಯಂತೆ ನಡೆಯಲಿರುವ ಹೋರಾಟದ ಸಿದ್ದತೆ ಬಗ್ಗೆ ನಡೆದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು 2005 ರಲ್ಲಿಡಾ ಮನಮೋಹನ್ ಸಿಂಗ್ ರವರ ದೇಶದ ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಪಂಚಾಯತ್ ವ್ಯವಸ್ಥೆ ಅತ್ಯಂತ ಬಲಿಷ್ಠ ವಾಗಿ ದೇಶದ ಪ್ರಗತಿಗೆ ಕಾರಣವಾಯಿತು.

ಕಳೆದ 20 ವರ್ಷಗಳಿಂದ ಈ ಯೋಜನೆಯಿಂದ ಪ್ರತಿ ಪಂಚಾಯತ್ ಗಳು ವಾರ್ಷಿಕ ಸರಾಸರಿ 1 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ನಡೆಸುತ್ತಾ ಬಂದಿದ್ದು ಕೂಲಿ ಕಾರ್ಮಿಕರು,ಮಹಿಳೆಯರು,ಬಡವರಿಗೆ ಉದ್ಯೋಗ ಕಲ್ಪಿಸಿದೆ.

ಇಂತಹ ಮಹತ್ವದ ಮತ್ತು ದೇಶದ ಪ್ರಗತಿಗೆ ಪೂರಕವಾದ ಯೋಜನೆಯನ್ನು ರದ್ದು ಮಾಡಿರುವುದು ಬಿಜೆಪಿ ಯವರ ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು.

ಭಾರತೀಯರ ಮನಸ್ಸಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಲು ಬಿಜೆಪಿ ನಡೆಸುತ್ತಿರು ಷಡ್ಯಂತರ ಇದಾಗಿದ್ದು ಕಾಂಗ್ರೆಸ್ ಪಕ್ಷ ಇಂತಹ ಷಡ್ಯಂತರಗಳನ್ನು ಕಾರ್ಯರೂಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಶೇಕಡಾ 90:10 ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮನರೇಗಾ ಯೋಜನೆಗೆ ಅನುದಾನ ಹಂಚಿಕೆ ಮಾಡಿದ್ದರೆ ಈಗ ಕೇಂದ್ರ ಸರ್ಕಾರ ಅದನ್ನು 60:40 ಕ್ಕೆ ಬದಲಾಯಿಸಿದೆ.ಇದರಿಂದ ಎಲ್ಲಾ ರಾಜ್ಯಗಳು ಈ ಯೋಜನೆಯನ್ನು ಸ್ಥಗಿತಗೊಳಿಸಲಿದೆ. ಈ ಮೂಲಕ ಬಿಜೆಪಿ ತನ್ನ ಗಾಂಧಿ ವಿರೋಧಿ ನೀತಿಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವ ಬೋಸರಾಜ್ ಟೀಕಿಸಿದರು.

ಭಾರತದ ಇತಿಹಾಸವನ್ನು ತಿರುಚಲು ಬಿಜೆಪಿ ಪ್ರಯತ್ನಿಸುತ್ತಿದೆ;ಎ.ಎಸ್.ಪೊನ್ನಣ್ಣ ಆರೋಪ

ಭಾರತದ ಸ್ವಾತಂತ್ರ್ಯ ಹೋರಾಟ,ನಂತರ ಕಾಂಗ್ರೆಸ್ ಪಕ್ಷ ದೇಶವನ್ನು ಪ್ರಗತಿಯ ಪಥದಲ್ಲಿ ಸಾಗಿಸಿದ್ದು,ಮಹಾತ್ಮ ಗಾಂಧಿಯವರ ಸೇವೆ,ನೆಹರೂ ಇಂದಿರಾಗಾಂಧಿ ಯವರ ಸಾಧನೆಗಳು ಸೇರಿದಂತೆ ಹಿಂದಿನ ಎಲ್ಲಾ ಐತಿಹಾಸಿಕ ಘಟನೆಗಳನ್ನು ಮರೆಮಾಚಿ 2014 ರಿಂದಲೇ ಭಾರತದ ಇತಿಹಾದ ಆರಂಭಗೊಂಡಿದೆ ಎಂದು ಬಿಂಬಿಸಿ ಬಿಜೆಪಿ ಯವರು ದೇಶದ ಇತಿಹಾದ ಬದಲಿಸಲು ಹೊರಟಿದ್ದಾರೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 100 ದಿನಗಳ ಉದ್ಯೋಗ ಮತ್ತು ಗರಿಷ್ಠ ಹೆಚ್ಚಿನ ದಿನ ಉದ್ಯೋಗದ ಭರವಸೆ ಇತ್ತು.ಆದರೆ ವಿಜಿ ರಾಮ್ ಜಿ ಯೋಜನೆಯಲ್ಲಿ 125 ದಿನ ಅಂತ ನಿಗದಿ ಪಡಿಸಿ ಅನ್ಯಾಯ ಮಾಡಲಾಗಿದೆ.

ಪಂಚಾಯತ್ ಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಇರುವ ಸ್ವಾಯತ್ತೆಗಳನ್ನು ಕಸಿದು ಕೇಂದ್ರ ಸರ್ಕಾರದ ವ್ಯಾಪಿಗೆ ಒಳಪಡಿಸಲಾಗಿದ್ದು ಇದು ಸಂವಿಧಾನ ಬಾಹಿರವಾದ ಪ್ರಕ್ರಿಯೆ ಆಗಿದೆ ಎಂದು ವಿವರಿಸಿದರು.ಇದರ ಬಗ್ಗೆ ಜನಾಂದೋಲ ರೀತಿಯಲ್ಲಿ ಹೋರಾಟ ನಡೆಸಬೇಕು ಎಂದು ಪೊನ್ನಣ್ಣ ಕರೆ ನೀಡಿದರು.

ಬಿಜೆಪಿ ದೇಶದಲ್ಲಿ ಆರ್.ಎಸ್.ಎಸ್ ಸಿದ್ದಾಂತ ಹೇರಲು ಹೊರಟಿದೆ; ಡಾ ಮಂತರ್ ಗೌಡ ಆರೋಪ

ಕಾಂಗ್ರೆಸ್ ಸಿದ್ದಾಂತವನ್ನು ಅಳಿಸುವ ಉದ್ದೇಶದಿಂದ ಬಿಜೆಪಿ ಆರ್.ಎಸ್.ಎಸ್. ಸಿದ್ದಾಂತವನ್ನು ಹೇರಲು ಹೊರಟಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಆರೋಪಿಸಿದರು.

ಮನರೆಗಾ ಸೇರಿದಂತೆ ಅನೇಕ ರೋಜಗಾರ್ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷ ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಿದೆ.ಆದರೆ ಕಾಂಗ್ರೆಸ್ ಜನಪರ ಯೋಜನೆಗಳನ್ನು ಜನರಿಂದ ಮರೆ ಮಾಚಲು ಬಿಜೆಪಿ ವಿಜಿ ರಾಮ್ ಜಿ ಯೋಜನೆಯಾಗಿ ಮಾರ್ಪಾಡು ಮಾಡಿದೆ.ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು ಮತ್ತು ಜನಜಾಗೃತಿ ಮೂಲಕ ಗ್ರಾಮ ಸ್ವರಾಜ್ ವ್ಯವಸ್ಥೆಗೆ ಆಗಿರುವ ಅನ್ಯಾಯವನ್ನು ತಡೆಗಟ್ಟಬೇಕು ಎಂದು ಕಾರ್ಯಕರ್ತರಿಗೆ ಡಾ ಮಂತರ್ ಗೌಡ ಸಲಹೆ ನೀಡಿದರು.

ಬಿಜೆಪಿ ಅರ್ಧ ದೇಶವನ್ನೇ ಹಾಳುಮಾಡಿದೆ

2014 ರಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅರ್ಧ ದೇಶವನ್ನು ಹಾಳುಮಾಡಿದ್ದು ಈಗ ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಪೂರ್ತಿಯಾಗಿ ದೇಶವನ್ನು ಹಾಳು ಮಾಡಲು ಹೊರಟಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷಣ್ ಟೀಕಿಸಿದರು. ಜಗತ್ತಿನ ಅಪ್ರತಿಮ 

ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದ ಪ್ರಗತಿಗಾಗಿ 40 ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳಲ್ಲಿ 20 ಯೋಜನೆಗಳನ್ನು ಬಿಜೆಪಿ ರದ್ದು ಪಡಿಸಿ ದೇಶಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಪ್ರಾಸ್ತಾವಿಕ ವಾಗಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ ಮಾತನಾಡಿ ಕೆಪಿಸಿಸಿ ಮಾರ್ಗಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ,ತಾಲೂಕು ಮಟ್ಟದಲ್ಲಿ ಮತ್ತು ಹೋಬಳಿಮಟ್ಟದಲ್ಲಿ ಹೋರಾಟಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರತಿಯೊಬ್ಬ ನಾಗರೀಕರಿಗೂ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯಗಳನ್ನು ಮನದಟ್ಟು ಮಾಡುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಧ್ಯಕ್ಷರಾದ ಅರುಣ್ ಮಾಚಯ್ಯ,ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ,ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ,ಕೆ.ಬಿ.ಶಾಂತಪ್ಪ,ಡಿಸಿಸಿ ಉಪಾಧ್ಯಕ್ಷರಾದ ಕೆ.ಎಂ.ಲೋಕೇಶ್, ಸುಜು ತಿಮ್ಮಯ್ಯ,ಕೊಲ್ಯದ ಗಿರೀಶ್,ಮುನೀರ್ ಅಹಮದ್,ಟಿ.ಪಿ.ರಮೇಶ್ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಪಿ ಶಶಿಧರ್,ಹೆಚ್.ಎ.ಹಂಸ,ಇಸ್ಮಾಯಿಲ್. ಪಟ್ಟಡ ರಂಜಿ ಪೂಣಚ್ಚ,ಸತೀಶ್ ಕುಮಾರ್,ಮೀದೇರಿರ ನವೀನ್,ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಟಾಟು ಮೊಣ್ಣಪ್ಪ,ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್,ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ,ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ,ಕೆ.ಪಿ.ಸಿ.ಸಿಪ್ರಮುಖರಾದ ನಟೇಶ್ ಗೌಡ,ಹೆಚ್.ಎಂ.ನಂದಕುಮಾರ್,ಬೇಕಲ್ ರಮಾನಾಥ್, ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ,ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಹೊಸೂರು ಸೂರಜ್,ನಗರ ಕಾಂಗ್ರೆಸ್ ಅಧ್ಯಕ್ಷರಾದಪ್ರಕಾಶ್ ಆಚಾರ್ಯ,ಮಂಡಿರ ಸದಾ ಮುದ್ದಪ್ಪ,ಅಂಬೇಕಲ್ ಕುಶಾಲಪ್ಪ ,ಕಾನೆಹಿತ್ಲು ಮೊಣ್ಣಪ್ಪ,ಜಿ.ಸಿ.ಜಗದೀಶ್,ಮುದ್ದುರಾಜ್,ಲಾರೆನ್ಸ್,ಶಾಫಿ ಯಡಪಾಲ,ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು,ಡಿಸಿಸಿ ಪದಾಧಿಕಾರಿಗಳು ಮತ್ತು ಸದಸ್ಯರು,ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಸದಸ್ಯರು 

ಹಾಗೂ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.