ಕುಶಾಲನಗರ:,ಅಂಗಡಿ ಮಾಲಕಿಗೆ ವಂಚಿಸಿದ ಪರಾರಿಯಾದ ವ್ಯಕ್ತಿ
admincoorgdaily

ಕುಶಾಲನಗರ, ಡಿ 21: ಕುಶಾಲನಗರದ ಎನ್.ಟಿ.ಸಿ ಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ವಂಚಕ ಮಳಿಗೆ ಮಾಲಕಿಗೆ ಗೊಂದಲ ಮೂಡಿಸಿ ಹಣ ವಂಚಿಸಿ ತೆರಳಿದ ಘಟನೆ ನಡೆದಿದೆ. 100 ರೂಗಳ ಆಟಿಕೆ ಖರೀದಿ ನೆಪದಲ್ಲಿ 500 ರೂ ನೀಡಿ ವಾಪಾಸ್ ಎರಡು ಬಾರಿ 500 ರೂಗಳನ್ನು ಪಡೆದು ಕೀಸೆಗಿರಿಸಿದಲ್ಲದೆ ಹಣ ನೀಡಿಲ್ಲ ಎಂದು ಚೆಲ್ಲರೆಯಾಗಿ 400 ರೂಗಳನ್ನು ಪೀಕಿ ಕಾಲ್ಕಿತ್ತಿದ್ದಾನೆ.
ತನ್ನದೇ ವೈಯಕ್ತಿಕ ಚಿಂತನೆಯಲ್ಲಿದ್ದ ಮಾಲಕಿ ಪುಷ್ಪ 1400 ರೂ ಯಾಮಾರಿಸಿರುವ ಬಗ್ಗೆ ಎಚ್ಚೆತ್ತುಗೊಂಡ ಸಿಸಿ ಕ್ಯಾಮೆರ ಪರಿಶೀಲಿಸಿದಾಗ ಮೋಸ ಹೋಗಿರುವುದು ಪತ್ತೆಯಾಗಿದೆ. ಈ ವಂಚನ ಬಗ್ಗೆ ವ್ಯಾಪಾರಿಗಳು ಎಚ್ಚರವಹಿಸಬೇಕೆಂದು ಅವರು ಸೂಚಿಸಿದ್ದು ಗುರುತು ಪತ್ತೆಯಾದಲ್ಲಿ ಸಂಖ್ಯೆಗೆ 95917 97854 ಮಾಹಿತಿ ನೀಡಲು ಕೋರಿದ್ದಾರೆ.