ಕೊಡಗಿನ ಶಾಸಕದ್ವಯರಿಗೆ ಮಂತ್ರಿ ಸ್ಥಾನ ನೀಡಿ;ಮಡಿಕೇರಿ ಕೊಡವ ಸಮಾಜದಿಂದ ಹೈಕಮಾಂಡ್ ಗೆ ಪತ್ರ
admincoorgdaily

ಮಡಿಕೇರಿ; ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರಿಗೆ ಡಿ.ಕೆ.ಶಿವಕುಮಾರ್ ರವರ ಸಚಿವ ಸಂಪುಟದಲ್ಲಿ ಮಂತ್ರಿಗಳ ಸ್ಥಾನ ನೀಡಬೇಕೆಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು ಹೈ ಕಮಾಂಡ್ ಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಎ.ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ,ನಿಯೋಜಿತ ಮುಖ್ಯ ಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ಬರೆದಿರುವ ಪತ್ರದಲ್ಲಿ ಖ್ಯಾತ ವಕೀಲರು ಹಾಗೂ ಡಾಕ್ಟರ್ ಆಗಿರುವ ಶಾಸಕದ್ವಯರಿಗೆ ಮಂತ್ರಿ ಸ್ಥಾನ ನೀಡಿದಲ್ಲಿ ಉತ್ಸಾಹ ಹಾಗೂ ಕ್ರೀಯಾಶೀಲರಾಗಿ ಕೆಲಸ ಮಾಡಿ ಸರ್ಕಾರಕ್ಕೆ ಮತ್ತು ರಾಜ್ಯಕ್ಕೆ ಉಪಯೋಗ ಆಗಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ನವರು ಉಲ್ಲೇಖಿಸಿದ್ದಾರೆ.