ಗೋಣಿಕೊಪ್ಪ: ಆಟೋ ನಿಲ್ದಾಣ ಉದ್ಘಾಟನೆ: ಆಟೋ ಚಾಲಕರು ಸೇವಾ ಮನೋಭಾವ ಬೆಳೆಸಿಕೊಳ್ಳಲು ಶಾಸಕ ಎ.ಎಸ್ ಪೊನ್ನಣ್ಣ ಸಲಹೆ
ಗೋಣಿಕೊಪ್ಪ: ಗೋಣಿಕೊಪ್ಪಲುವಿನಲ್ಲಿ 6ಲಕ್ಷ 40 ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಸ್ಪತ್ರೆ ಮುಂಭಾಗ ಹಾಗೂ ಎಸ್ ಬಿ ಐ ಮುಂಭಾಗದಲ್ಲಿ ಎರಡು ಆಟೋ ನಿಲ್ದಾಣವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಇಂದು ಲೋಕಾರ್ಪಣೆಗೈದರು. .ನೂತನ ಆಟೋ ನಿಲ್ದಾಣ ಲೋಕಾರ್ಪಣೆ ಸಂದರ್ಭದಲ್ಲಿ ತಮ್ಮ ಸಂತಸದವನ್ನು ಹಂಚಿಕೊಂಡ ಆಟೋ ಚಾಲಕರು ಶಾಸಕರಿಗೆ ಸನ್ಮಾನಿಸಿ ಧನ್ಯವಾದಗಳು ಅರ್ಪಿಸಿದರು.
ಸ್ಥಳದಲ್ಲಿದ್ದ ಆಟೋ ಚಾಲಕರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಆಟೋ ಚಾಲಕರು ಹಗಲು ರಾತ್ರಿ ಜನಸಾಮಾನ್ಯರ ಸೇವೆಯಲ್ಲಿ ನಿರತರಾಗಿದ್ದು, ಅವರಿಗೆ ಅನುಕೂಲ ಕಲ್ಪಿಸಿ ಕೊಡುವುದು ತನ್ನ ಹಾಗೂ ಸರಕಾರದ ಜವಾಬ್ದಾರಿ ಆಗಿದೆ ಎಂದು ಹೇಳಿದರು. ಅದರಂತೆಯೇ ಚಾಲಕರು ಸಹ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ವರ್ತಿಸಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಕುಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಪಿ ಡಿ o ತಿಮ್ಮಯ್ಯ, ಅಂಕಿತ್ ಪೊನ್ನಪ್ಪ, ಕೋಲಿರ ಜಯ, ವಾಸು, ನಾಯಂದಿರ ಶಿವಾಜಿ ನಗರ ಉಪಾಧ್ಯಕ್ಷರು, ಧ್ಯಾನ್ ಸುಬ್ಬಯ್ಯ, ಕುಸುಮ, ಧನ್ಯ, ಗಣೇಶ್ ಕೆ ಎಂ, ಗ್ಯಾರಂಟಿ ಅನುಷ್ಠಾನ ಸದಸ್ಯರು ಕಲೀದ್, ಜೋಸೆಫ್, ಕುಂದಚೀರ ಮಂಜು ದೇವಯ್ಯ, ಅಯೂಬ್, ಆಟೋ ಚಾಲಕರು ಪ್ರಮುಖರು ಉಪಸ್ಥಿತರಿದ್ದರು.