ಗೋಣಿಕೊಪ್ಪ; ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ರಾಮನವಮಿ ಸಂಭ್ರಮಾಚರಣೆ

Mar 27, 2026 - 16:29
 0  313
ಗೋಣಿಕೊಪ್ಪ; ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ರಾಮನವಮಿ ಸಂಭ್ರಮಾಚರಣೆ

ಗೋಣಿಕೊಪ್ಪ: ರಾಮನವಮಿ ಪ್ರಯುಕ್ತ ಗೋಣಿಕೊಪ್ಪ ನಗರ ಹಿಂದೂ ಪರ ಸಂಘಟನೆಗಳು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ರಾಮ ಸ್ತೋತ್ರವನ್ನು ಪಠಿಸಿ ಸಮಾಜದ ಸುಭೀಕ್ಷೆಗೆ ಪ್ರಾರ್ಥಿಸಿದರು.

ನಂತರ ನೆರದವರಿಗೆ ಸಿಹಿ ಹಂಚಲಾಯಿತು. ಈ ಸಂಧರ್ಭ ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ತಾಲೂಕು ಪ್ರಖಂಡ ಅಧ್ಯಕ್ಷ ಅಮೃತ್‌ರಾಜ್, ಉಪಾಧ್ಯಕ್ಷ ಎಂ.ಎಸ್ ಸುಬ್ರಮಣಿ, ಕಾರ್ಯದರ್ಶಿ ಉಮೇಶ್, ಮಾಜಿ ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಗೋಣಿಕೊಪ್ಪ ನಗರ ಘಟಕ ಕಾರ್ಯದರ್ಶಿ ಕೆ.ವಿ. ಸುರೇಶ್, ಗೋ ರಕ್ಷಕ್ ಅರುಣ್‌ಗೋಪಾಲಕೃಷ್ಣ, ಪ್ರಚಾರಕ್ ಪುಷ್ಪಾರಾಜ್, ಸಂಘ ಪರಿವಾರದ ಪ್ರಮುಖರಾದ ನೆಲ್ಲೀರ ಚಲನ್, ಸುರೇಶ್ ರೈ, ರಾಜೇಶ್, ಕೊಣಿಯಂಡ ಬೋಜಮ್ಮ, ಕೆ.ಜಿ.ರಾಮಕೃಷ್ಣ, ದೀಪಕ್, ಕುಮಾರ, ಬೆಂಜಂಡ ರಶ್ಮಿ ದೇವಯ್ಯ, ಎಂ.ಎನ್. ಗಣೇಶ್, ಅಣ್ಣಪ್ಪ, ಚೇತನ್, ಸುಬ್ರಮಣಿ, ಜ್ಯೊತಿ, ವಿನು, ಲಕ್ಷ್ಮಿ ರೆಡ್ಡಿ, ಮಂಜು, ವಿನೋದ್, ಧನಲಕ್ಷ್ಮಿ, ಮಣಿಕಂಠ, ಶಿವು ಇದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0