ಗೋಣಿಕೊಪ್ಪ:ಯೂರಿಯಾ ಗೊಬ್ಬರ ತುಂಬಿದ ಲಾರಿ ರಸ್ತೆಯಲ್ಲೇ ಪಲ್ಟಿ

Dec 26, 2025 - 17:54
 0  751
ಗೋಣಿಕೊಪ್ಪ:ಯೂರಿಯಾ ಗೊಬ್ಬರ ತುಂಬಿದ ಲಾರಿ ರಸ್ತೆಯಲ್ಲೇ ಪಲ್ಟಿ

ಗೋಣಿಕೊಪ್ಪ: ಯೂರಿಯಾ ಗೊಬ್ಬರ ತುಂಬಿದ ಲಾರಿ ರಸ್ತೆಯಲ್ಲೇ ಮಗುಚಿಕೊಂಡ ಘಟನೆ ಗೋಣಿಕೊಪ್ಪದ ಚನ್ನಂಗೊಲ್ಲಿ ಸಮೀಪ ನಡೆದಿದೆ.

ಮೈಸೂರು ಮಾರ್ಗದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಗೊಬ್ಬರ ತುಂಬಿದ ಲಾರಿ ಚನ್ನೆಂಗೊಲ್ಲಿ ಸಮೀಪ ಸಂಚಾರ ಮಾಡುತ್ತಿದ್ದಾಗ ಲಾರಿಯ ಟೈಯರ್ ಒಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿ ಚಾಲಕನ ಎಡಬದಿಗೆ ಮಗುಚಿ ಕೊಂಡಿದೆ.

ಲಾರಿ ತನ್ನ ನಿಯಂತ್ರಣ ತಪ್ಪಿ ಸುಮಾರು ೫೦ ಮೀಟರ್‌ವರೆಗೆ ಜಾರಿಗೊಂಡಾಗ ಸಮೀಪದಲ್ಲಿದ್ದ ಟೀ ಕ್ಯಾಂಟೀನ್ ಎದುರಿಗೆ ನಿಲ್ಲಿಸಿದ ಎರಡು ಸ್ಕೂಟರ್‌ಗಳಿಗೂ ಡಿಕ್ಕಿ ಹೊಡೆದಿದೆ.ಲಾರಿಯ ಚಾಲಕ ಹಾಗೂ ಕ್ಲೀನರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ.ಘಟನೆ ನಡೆದ ಸ್ಥಳದಿಂದ ಈ ಇಬ್ಬರು ಸಹ ಪರಾರಿಯಾಗಿದ್ದಾರೆ.

ಲಾರಿ ವಿರಾಜಪೇಟೆಯ ಆರ್ಜಿ ಗ್ರಾಮದ ರಶೀದ್ ಅನ್ನುವವರಿಗೆ ಸೇರಿದ್ದು ಗೊಬ್ಬರಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಗೋಣಿಕೊಪ್ಪ ಪೊಲೀಸ್ ಠಾಣಾ ಅಧಿಕಾರಿ ಪ್ರದೀಪ್ ಕುಮಾರ್ ಬಿ.ಕೆ ಮತ್ತು ಎಎಸ್‌ಐ ಧನಪತಿ, ವೆಂಕಟೇಶ್, ಶಶಿ ಕುಮಾರ್, ತನು ಕುಮಾರ್, ಸತೀಶ್, ಲೋಕೇಶ್ ಸ್ಥಳಕ್ಕೆ ಆಗಮಿಸಿ, ಘಟನೆ ಗಂಭೀರತೆಯನ್ನು ಅರಿತು ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1