ಗೋಣಿಕೊಪ್ಪ ದಸರಾ:ನಾಡಹಬ್ಬ ದಸರಾ ಸಂಸ್ಕೃತಿ,ಪರಂಪರೆಯನ್ನು ಸಾರುತ್ತದೆ: ಶಾಸಕ‌ ಎ‌ಎಸ್ ಪೊನ್ನಣ್ಣ

ಗೋಣಿಕೊಪ್ಪ ದಸರಾ:ನಾಡಹಬ್ಬ ದಸರಾ ಸಂಸ್ಕೃತಿ,ಪರಂಪರೆಯನ್ನು ಸಾರುತ್ತದೆ: ಶಾಸಕ‌ ಎ‌ಎಸ್ ಪೊನ್ನಣ್ಣ

ಗೋಣಿಕೊಪ್ಪ:ಪ್ರಸಿದ್ಧ ಗೋಣಿಕೊಪ್ಪ ದಸರಾ ಉತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.

ಈ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಳಿಕ ಮಾತನಾಡಿದ ಮಾನ್ಯ ಶಾಸಕರು, ನಾಡಹಬ್ಬ ದಸರಾ ಉತ್ಸವವು ಎಲ್ಲರಲ್ಲಿ ಸಂಭ್ರಮದ ವಾತಾವರಣವನ್ನು ಉಂಟು ಮಾಡಿದೆ.ನಮ್ಮ ಸಂಸ್ಕೃತಿ ಪರಂಪರೆಯನ್ನು ಸಾರುವ ಈ ಹಬ್ಬವು ನಾಡಿನ ಎಲ್ಲಾ ಜನರಿಗೆ ಸುಖ ಶಾಂತಿಯ ನೀಡಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು

. ಈ ಸಂದರ್ಭದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರು ಕುಲಚಂಡ ಪ್ರಮೋದ್ ಗಣಪತಿ, ಪಂಚಾಯಿತಿ ಉಪಾಧ್ಯಕ್ಷರು ಮಂಜುಳಾ, ಕಾವೇರಿ ದಸರಾ ಸಮಿತಿಯ ಉಪಾಧ್ಯಕ್ಷರು, ಪುರಾಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ತಹಶೀಲ್ದಾರ್ ಮೋಹನ್, ಕೊಳೇರ ಟೀನಾ ರನ್ನ, ಶ್ರೀ ಶ್ರೀ ಪರಮ ಪೂಜ್ಯ ಶ್ರೀಮದ್ ಪರಹಿತನಂದಾಜಿ ಮಹರಾಜ್, ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಪುರಾಸಭೆ ಸದಸ್ಯರು ಮತೀನ್, ರಾಫಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಪೃಥ್ವಿ, ನಾಯಂದಿರ ಶಿವಾಜಿ, ಕೊಕ್ಕಂಡ ರೋಷನ್, ಗುರು, ಅಂಕಿತ್, ಶ್ರೇಯಸ್, ಕಂದ ದೇವಯ್ಯ, ಕೌಶಿಕ್ ಕಾರ್ಯಪ್ಪ, ಆದಿತ್ಯ ಪೆಮ್ಮಯ್ಯ, ದಿಲನ್ ಚಂಗಪ್ಪ, ಸುಧಿ ಸುಬ್ಬಯ್ಯ, ಕಡೆಮಾಡ ಕುಸುಮ, ನೊರೆರ ಧನ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.