ಗೋಣಿಕೋಪ್ಪ;ಜಿಂಕೆಯ ಮಾಂಸ ಸಾಗಣೆ; ಆರೋಪಿಗಳು ಪರಾರಿ

Feb 26, 2026 - 23:39
 0  2.7k
ಗೋಣಿಕೋಪ್ಪ;ಜಿಂಕೆಯ ಮಾಂಸ ಸಾಗಣೆ; ಆರೋಪಿಗಳು ಪರಾರಿ

ಗೋಣಿಕೊಪ್ಪ; ಕಾಡುಪ್ರಾಣಿಯ ಮಾಂಸ ಸಾಗಣೆ ಮಾಡುತ್ತಿದ್ದ ವಾಹನವನ್ನು ತಿತಿಮತಿ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳ ಪರಾರಿ ಆಗಿದ್ದಾರೆ. ಕಾರಿನಲ್ಲಿ ಮಾಂಸ ಸಾಗಣೆ ಬಗ್ಗೆ ಮಾಹಿತಿ ಕೇಳಿ ಬಂದಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು ಗುರುವಾರ ಬೆಳಗ್ಗಿನ ಕಾರನ್ನು ಹಿಂಬಾಲಿಸಿ, ಆನೆಚೌಕೂರು ವನ್ಯಜೀವಿ ವಲಯದ ಬಫರ್ ಝನ್ ಪ್ರದೇಶದ ದೇವಮಚ್ಚಿ ಗ್ರಾಮದ ಅಕ್ಕಮಾಳ ಅಂಗನವಾಡಿಯ ಮುಂಭಾಗದಲ್ಲಿ ಕಾರನ್ನು ಅಡ್ಡಗಟ್ಟಿದರು.

ಈ ವೇಳೆ ಕಾರಿನ ಮುಂಭಾಗದ ಟಯ‌ರ್ ಪಂಚ‌ರ್ ಆದ ಕಾರಣ ಆರೋಪಿಗಳು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದರು. ಈ ವೇಳೆ ವಾಹನದಲ್ಲಿ 6 ಕೆಜಿ ಮಾಂಸ ಪತ್ತೆಯಾಗಿದ್ದು, ಜಿಂಕೆಯ ಮಾಂಸ ಎಂದು ಶಂಕಿಸಲಾಗಿದೆ.

 ಉಳಿದಂತೆ ಪ್ಲಾಸ್ಟಿಕ್ ಕವರ್, ಮರದ ಹಿಡಿಕೆ ಇರುವ ಕತ್ತಿ, ವಿವಿಧ ಬಣ್ಣದ 9 ಜೀವಂತ ಕಾಡತೋಪುಗಳು, ಲೆದರ್ ಬ್ಯಾಗ್, ಟಾರ್ಚ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿ ಕಾರಿ ಸೀಮಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ಆನೆಚೌಕೂರು ವನ್ಯ ಜೀವಿ ವಲಯ ಆರಣ್ಯಾಧಿಕಾರಿ ದೇವರಾಜು ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಚನವೀರೇಶ ಗಾಣಗೇರ, ದೇವಮಚ್ಚಿ ಶಾಖೆ ಮೋಜಣಿದಾರ ಸಿದ್ದಾಪ್ಪಾಜಿ, ಗಸ್ತು ಅರಣ್ಯ ಪಾಲಕರಾದ ಭೀಮನಾರೆ, ಹನುಮಂತಪ್ಪ, ತಿತಿಮತಿ ಎಸ್.ಟಿ.ಪಿ.ಎಫ್ ಪ್ಲಾಟನ್, ಕಾರ್ತಿಕ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0