ಗೋಣಿಕೊಪ್ಪ:ಬೀದಿ ನಾಯಿ ದಾಳಿಗೆ ವಿದ್ಯಾರ್ಥಿಗಳು ಸೇರಿ ನಾಲ್ವರಿಗೆ ಗಾಯ: ಬೀದಿ ಶ್ವಾನವನ್ನು ಹೊಡೆದ ಸಾಯಿಸಿದ ಸ್ಥಳೀಯರು

Dec 28, 2025 - 10:33
 0  835
ಗೋಣಿಕೊಪ್ಪ:ಬೀದಿ ನಾಯಿ ದಾಳಿಗೆ ವಿದ್ಯಾರ್ಥಿಗಳು ಸೇರಿ ನಾಲ್ವರಿಗೆ ಗಾಯ:  ಬೀದಿ ಶ್ವಾನವನ್ನು ಹೊಡೆದ ಸಾಯಿಸಿದ ಸ್ಥಳೀಯರು
ಬೀದಿ ನಾಯಿ ದಾಳಿಯಿಂದ ಗಾಯಗೊಂಡಿರುವುದು

ಗೋಣಿಕೊಪ್ಪ: ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಸ್ಥಳೀಯರು ಬೀದಿ ಶ್ವಾನವನ್ನು ಹೊಡೆದು ಸಾಯಿಸಿದ್ದಾರೆ.

ಯುವನಿಕಾ(13), ಗ್ರಹಿತ ವಿ.ಆರ್. (10), ಶ್ರೀನಿವಾಸ್ (45), ತಜವೀಯ (25) ಗಾಯಗೊಂಡವರು. ಶನಿವಾರ ಬೆಳಗ್ಗೆ 8.50ಕ್ಕೆ ಮೈಸೂರಮ್ಮ ನಗರದಿಂದ ಗೋಣಿಕೊಪ್ಪ ಬಸ್‌ ನಿಲ್ದಾಣಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಶಾಲೆಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಇನ್ನಿಬ್ಬರ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಪರಿಣಾಮ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಗ್ರೀಷ್ಮ ಬೋಜಮ್ಮ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಏತನ್ಮಧ್ಯೆ, ವಿದ್ಯಾರ್ಥಿಗಳು ಮತ್ತು ಜನರ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಯಿಂದ ಮತ್ತಷ್ಟು ಸಂಭವಿಸಬಹುದಾದ ಅನಾಹುತ ತಪ್ಪಿಸುವ ಸಲುವಾಗಿ ಸಾರ್ವಜನಿಕರು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ

“ಗೋಣಿಕೊಪ್ಪದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ರಸ್ತೆಯಲ್ಲಿ ತೆರಳಲು ಭಯಪಡುವಂತಾಗಿದೆ. ಸಣ್ಣ ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸುತ್ತಿವೆ. ಕೈಯಲ್ಲಿ ವಸ್ತುಗಳನ್ನು ಹಿಡಿದು ನಡೆದು ಹೋಗುತ್ತಿರುವಾಗ ದಾಳಿಗೆ ಮುಂದಾಗು ತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು'' ಎಂದು ಜನತೆ ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 7
Wow Wow 0