ಹಸಿ ಮೀನು ಮಾರಾಟ ಮಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಬಂಧನೆ ಉಲ್ಲಂಘಿಸಿದ ಪರಿಣಾಮ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ 1,20,105 ರೂಪಾಯಿಗಳ ನಷ್ಟ: ಗ್ರಾಪಂ ಮಾಜಿ ಸದಸ್ಯ ಮುರುಗ ಹೆಚ್.ಬಿ ಆರೋಪ

Mar 25, 2026 - 16:35
 0  447
ಹಸಿ ಮೀನು ಮಾರಾಟ ಮಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಬಂಧನೆ ಉಲ್ಲಂಘಿಸಿದ ಪರಿಣಾಮ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ 1,20,105 ರೂಪಾಯಿಗಳ ನಷ್ಟ: ಗ್ರಾಪಂ ಮಾಜಿ ಸದಸ್ಯ ಮುರುಗ ಹೆಚ್.ಬಿ ಆರೋಪ
ಮುರುಗ

ಗೋಣಿಕೊಪ್ಪ: ಹಸಿ ಮೀನು ಮಾರಾಟ ಮಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಬಂಧನೆ ಉಲ್ಲಂಘಿಸಿದ ಪರಿಣಾಮ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ 1,20,105 ರೂಪಾಯಿಗಳು ನಷ್ಟ ಉಂಟಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಮುರುಗ ಹೆಚ್.ಬಿ ಆರೋಪಿಸಿ ಸಕ್ಷಮ ಪ್ರಾಧಿಕಾರ ಮತ್ತು ಕಾರ್ಯನಿರ್ವಾಕ ಅಧಿಕಾರಿಯವರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಚಾರವಾಗಿ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ, ಮಾಜಿ ಸದಸ್ಯ ಮುರುಗ ಹೆಚ್.ಬಿ ಮಾರ್ಚ್ 17ರಂದು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಿತು. ನಿಬಂಧನೆಯಂತೆ ಸೀಲ್ ಟೆಂಡರ್‌ನಲ್ಲಿ ಭಾಗವಹಿಸದೆ ಇದ್ದಾಗ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕಾಗಿತ್ತು. ಆದರೆ ನಿಯಮವನ್ನು ಉಲ್ಲಂಘಿಸಿ ಸರ್ಕಾರಿ ನಿಗಧಿಪಡಿಸಿದ 16,80,105 ರೂಪಾಯಿಗಳ ಸವಾಲನ್ನು ಧಿಕ್ಕರಿಸಿ, ಹರಾಜಿನಲ್ಲಿ ಭಾಗವಹಿಸಿದ ಎ.ಎಸ್ ಬೋಪಣ್ಣ ಅವರಿಗೆ 15 ಲಕ್ಷದ ಅರವತ್ತು ಸಾವಿರ ರೂಪಾಯಿಗೆ ನೀಡಿದರ ಪರಿಣಾಮ ಪಂಚಾಯಿತಿಗೆ ಬಹುದೊಡ್ಡ ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಚಾರವಾಗಿ ಸಕ್ಷಮ ಪ್ರಾಧಿಕಾರ ಮತ್ತು ಕಾರ್ಯನಿರ್ವಾಕ ಅಧಿಕಾರಿಯವರ ನ್ಯಾಯಾಲಯದಲ್ಲಿ ಹಾರಜು ಪ್ರಕ್ರಿಯೆಯನ್ನು ತಡೆಹಿಡಿದು ಮರು ಹರಾಜು ನಡೆಸಬೇಕೆಂದು ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಪಂಚಾಯತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಡೆ ಗಮನ ಹರಿಸದೆ ಕಾಲಹರಣ ಮಾಡುತ್ತಿದ್ದಾರೆ. ಜನರ ಭರವಸೆಗಳಿಗೆ ನಿರೀಕ್ಷೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಈ ಭಾಗದಲ್ಲಿ ಕಸದ ಸಮಸ್ಯೆ ಕಾಡುತ್ತಿದೆ. ಚರಂಡಿಗಳಲ್ಲಿಯೂ ತ್ಯಾಜ್ಯಗಳು ತುಂಬಿಕೊಂಡಿವೆ. ಮೀನು ಮತ್ತು ಮಾಂಸ ಮಾರುಕಟ್ಟೆ ಮಳಿಗೆಗಳ ಮುಂಭಾಗದ ಚರಂಡಿಗಳಲ್ಲಿಯೂ ತ್ಯಾಜ್ಯಗಳು ತುಂಬಿಕೊAಡಿದ್ದರೂ ಸ್ವಚ್ಛ ಮಾಡುವಲ್ಲಿ ಆಸಕ್ತಿ ತೋರುತ್ತಿಲ್ಲ. ಪಂಚಾಯಿತಿ ಆಡಳಿತಾತ್ಮಕವಾಗಿ ನಿವಾರಣೆ ಮಾಡಲು ಸಾಧ್ಯವಾಗದೆ ಬಾಳುತ್ತಿದೆ.

 ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ನಡುವಿನ ಸಣ್ಣ ಮುನಿಸು ಅಧ್ಯಕ್ಷ ಪ್ರತಿಷ್ಠೆಯಾಗಿ ಮೆರೆಯುತ್ತಿದೆ. ಎಲ್ಲ ಕಾರಣದಿಂದ ಜನರು ಇಟ್ಟ ನಿರೀಕ್ಷೆ ಇಲ್ಲಿ ಹುಸಿಯಾಗುತ್ತಿದೆ. ಅಧ್ಯಕ್ಷರ ಮತ್ತು ಕೆಲವು ಸದಸ್ಯರುಗಳ ಬೇಜವಾಬ್ದಾರಿತನ ವರ್ತನೆ ಪಂಚಾಯಿತಿಗೆ ಕ್ರೂಡೀಕರಣವಾಗಬೇಕಾದ ಆರ್ಥಿಕ ಭದ್ರತೆ ಸಡಿಲಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

  ಈ ಬಗ್ಗೆ ಪಂಚಾಯಿತಿ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳದೆ ಇದ್ದರೇ ಸ್ಥಳೀಯ ಗ್ರಾಮಸ್ಥರೊಂದಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳೊಂದಿಗೆ ಪಂಚಾಯಿತಿ ಕಛೇರಿ ಎದರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0