ಗೋಣಿಕೊಪ್ಪ : ಕೊಡಗು ಹಿಂದೂ ಮಲಯಾಳಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

May 19, 2026 - 17:05
 0  387
ಗೋಣಿಕೊಪ್ಪ : ಕೊಡಗು ಹಿಂದೂ ಮಲಯಾಳಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಗೋಣಿಕೊಪ್ಪ : ಕೊಡಗು ಹಿಂದೂ ಮಲಯಾಳಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಮಹಾಸಭೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಕೆ. ಪಿ. ಪ್ರಶಾಂತ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

   ಅಗಲಿದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ನಿರ್ದೇಶಕಿ ವಿ. ಎನ್. ರೀನಾ ಕಳೆದ ಮಹಾಸಭೆ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಿ. ವಿ. ಅರುಣ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಶಾಜಿ ಅಚ್ಚುತ್ತನ್ ಲೆಕ್ಕ ಪತ್ರ ಮಂಡಿಸಿದರು. ಸರಳ ಮಣಿಲಾಲ್ ವಂದಿಸಿದರು.

   ಅಧ್ಯಕ್ಷ ಕೆ. ಪಿ. ಪ್ರಶಾಂತ್‌ಕುಮಾರ್ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿದರೆ ಸಮಾಜದ ಅಭಿವೃದ್ದಿ ಸಾಧ್ಯವಿದೆ. ಸದಸ್ಯತ್ವ ಅಭಿಯನದೊಂದಿಗೆ ಮರಣ ನಿಧಿ ಸ್ಥಾಪಿಸುವುದು ಕೂಡ ಸದಸ್ಯರ ಕುಟುಂಬಕ್ಕೆ ನೆರವಾಗಲಿದೆ. ಸಮಾಜದಲ್ಲಿ ಅರ್ಥಿಕ ಕ್ರೋಡೀಕರಣದ ಮೂಲಕ ಸ್ವಂತ ಜಾಗ ಖರೀದಿಸಿ ಸಮಾಜದ ಕಟ್ಟಡ ನಿರ್ಮಿಸಲು ಮುಂದಾಗಲು ಎಲ್ಲರ ಸಹಕಾರ ಅಗತ್ಯ ಎಂದರು.

  ಗೌರವ ಅಧ್ಯಕ್ಷ ಪಿ. ಎಸ್. ಶರತ್‌ಕಾಂತ್, ಖಜಾಂಜಿ ಶಾಜಿ ಅಚ್ಚುತನ್, ಉಪಾಧ್ಯಕ್ಷರುಗಳಾದ ಕೆ. ಜಿ. ಪ್ರಸಾದ್, ಸಿ. ಕೆ. ವೇಣುಗೋಪಾಲ್, ಪುಷ್ಪ ಮನೋಜ್, ಶ್ರೀಜಾ ಪ್ರದೀಪ್, ಸಂಘಟನಾ ಕಾರ್ಯದರ್ಶಿ ಟಿ. ಜಿ. ಮನು ಕುಮಾರ್, ಸರಳ ಮಣಿಲಾಲ್, ಸಹ ಕಾರ್ಯದರ್ಶಿ ಬಿಂದು ಸಾಜಿ, ಕಾನೂನು ಸಲಹೆಗಾರ ಕೆ. ಬಿ. ಸಂಜೀವ್, ನಿರ್ದೇಶಕರುಗಳಾದ ಪಿ. ಜಿ. ರಾಜಶೇಖರ್, ಪಿ. ವಿ. ಚಂದ್ರ, ರತೀಶ್ ಕುಮಾರ್, ವಿ. ಎನ್. ರೀನಾ, ಸುನಿತಾ ಕಣ್ಣನ್, ಪಾಲಿಬೆಟ್ಟ ಉಪ ಸಮಿತಿಯ ಅಧ್ಯಕ್ಷ ಪಿ.ವೈ. ಮುರುಳಿ, ಕಾರ್ಯದರ್ಶಿ ಮನೋಜ್ ಕುಮಾರ್ ಬಂಡೆ ಇದ್ದರು.

ಸನ್ಮಾನ ; ಸಾಧನೆ ಮಾಡಿದ ಸಮಾಜದ ಸದಸ್ಯ ಮಕ್ಕಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ಎಂ. ವಿ. ವಿಶ್ಮಿತ, ಬಿ. ಎ. ಅನುರಾಗ್, ಎನ್. ಎಸ್. ಶ್ರೀಹರಿ, ದ್ವಿತಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶಿವಾನಿ, ವಿ. ಎ. ಆತ್ಮಿಕ, ವಿಜ್ಞಾನ ವಿಭಾಗದಲ್ಲಿ ಎಂ. ಟಿ. ಶ್ರೇಯ, ವಿ. ಎ. ಕ್ರಿಶ್ಮಾ, ಕ್ರೀಡಾ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ಸಾಧನೆ ಮಾಡಿರುವ ಎಂ. ಎಸ್. ನಂದನ ಸನ್ಮಾನ ಸ್ವೀಕರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1