ಗುಡ್ಡೆಹೊಸೂರು: ಬಸವನಹಳ್ಳಿಯಲ್ಲಿ ಕೇರಳ ಮೂಲದ ಶುಂಠಿ ಕಾವಲುಗಾರನ ಹತ್ಯೆ
admincoorgdaily
ಕುಶಾಲನಗರ:ಸಮೀಪದ ಗುಡ್ಡೆಹೊಸೂರು ಬಸವನಹಳ್ಳಿಯಲ್ಲಿ ಕೇರಳ ಮೂಲದ ವೃದ್ಧನನ್ನು ಹತ್ಯೆಮಾಡಿರುವ ಘಟನೆ ನಡೆದಿದೆ. ಶುಂಠಿ ಹೊಲದಲ್ಲಿ ಕಾವಲುಗಾರ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಮುರಳಿ ಎಂಬಾತ ಕೊಲೆಯಾದ ವ್ಯಕ್ತಿ. ಬಸವನಹಳ್ಳಿ ಗ್ರಾಮದ ತೀರ್ಥ ಎಂಬಾತನಿಂದ ಕೃತ್ಯ ನಡೆದಿದ್ದು,ಆರೋಪಿ ತೀರ್ಥ ತನ್ನ ಪತ್ನಿಯ ಮೇಲೂ ಕತ್ತಿಯಿಂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.