ಚೆರಿಯಪರಂಬುವಿನಲ್ಲಿ ಯಶಸ್ವಿಯಾಗಿ ನಡೆದ ಹಜ್ ತರಬೇತಿ ಶಿಬಿರ

Apr 9, 2026 - 23:31
Apr 9, 2026 - 23:36
 0  127
ಚೆರಿಯಪರಂಬುವಿನಲ್ಲಿ ಯಶಸ್ವಿಯಾಗಿ ನಡೆದ ಹಜ್ ತರಬೇತಿ ಶಿಬಿರ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ಕೂರ್ಗ್ ಜಂಇಯ್ಯತ್ತುಲ್ ಉಲಮಾ ಮಡಿಕೇರಿ ಝೋನ್ ಸಮಿತಿ ವತಿಯಿಂದ ನಾಪೋಕ್ಲು ಬಳಿಯ ಚೆರಿಯಪಂಬುವಿನಲ್ಲಿ ಹಜ್ ಯಾತ್ರಾರ್ಥಿಗಳಿಗೆ ಆಯೋಜಿಸಲಾದ ಹಜ್ ತರಬೇತಿ ಶಿಬಿರವು ಯಶಸ್ವಿಯಾಗಿ ನಡೆಯಿತು.

 ಚೆರಿಯಪರಂಬುವಿನ ಶಾದಿ ಮಹಲ್ ಸಭಾಂಗಣದಲ್ಲಿ ಕೂರ್ಗ್ ಜಂಇಯತ್ತುಲ್ ಉಲಮಾ ಮಡಿಕೇರಿ ಝೋನ್ ಅಧ್ಯಕ್ಷರಾದ ಮುನೀರ್ ಮಲ್ಹರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ಶಾದುಲಿ ಫೈಝಿ ಅವರು ಉದ್ಘಾಟಿಸಿ ಮಾತನಾಡಿದರು.

 ಅಬ್ದುಲ್ ರಶೀದ್ ದಾರಿಮಿ ಕಣ್ಣೂರ್ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ ನೀಡಿ ಹಜ್ ಸಂದರ್ಭ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಜ್ ಇನ್ಸ್ಪೆಕ್ಟರ್ ಫಾರೂಕ್ ಪೊಲೀಸ್ ತರಬೇತಿ ಶಿಬಿರಕ್ಕೆ ಶುಭ ಹಾರೈಸಿ ಮಾತನಾಡಿದರು.

 ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಪೋಯಕೇರಿ ಹಂಝ ಅಝಾದ್ ನಗರ ಪಾಲ್ಗೊಂಡಿದ್ದರು. ಶಿಬಿರದಲ್ಲಿ 150 ಕ್ಕೂಅಧಿಕ ಹಜ್ ಯಾತ್ರಾರ್ಥಿಗಳು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. 

ಈ ಸಂದರ್ಭ ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಲ್ ಸಅದಿ, ಕೂರ್ಗ್ ಜಂಇಯ್ಯತ್ತುಲ್ ಉಲಮಾ ಝೋನ್ ಸಮಿತಿಯ ಕಾರ್ಯದರ್ಶಿ ಶಂಸುದ್ದೀನ್ ಅಮ್ಜದಿ,ಕೋಶಾಧಿಕಾರಿ ಮುನೀರ್ ಸಅದಿ,ಎಸ್ ವೈ ಎಸ್ ಇಸಾಬ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ,ಎಸ್ ವೈ ಎಸ್ ಇಸಾಬ ತಂಡದ ಸದಸ್ಯರು,ಚೆರಿಯಪರಂಬು ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರು,ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಂಸುದ್ದೀನ್ ಅಮ್ಜದಿ ಸ್ವಾಗತಿಸಿ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0