ಹೆಬ್ಬಾಲೆ : ಗಮನ ಸೆಳೆದ ಎತ್ತಿನ ಗಾಡಿ ಓಟದ ಸ್ಪರ್ಧೆ

Nov 23, 2025 - 18:33
 0  533
ಹೆಬ್ಬಾಲೆ : ಗಮನ ಸೆಳೆದ ಎತ್ತಿನ ಗಾಡಿ ಓಟದ ಸ್ಪರ್ಧೆ

ಕುಶಾಲನಗರ : ಜಿಲ್ಲೆಯ ಗಡಿ ಗ್ರಾಮವಾದ ಹೆಬ್ಬಾಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ಬನಶಂಕರಿ ಅಮ್ಮನವರ ಹಬ್ಬದ ಅಂಗವಾಗಿ ನಡೆದ ಈ ಗಾಡಿ ಓಟದ ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ಜನರು ಸೇರಿದಂತೆ ಮೈಸೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನತೆ ಭಾಗವಹಿಸಿದ್ದು ವಿಶೇಷವೆನಿಸಿತ್ತು. ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಸ್ಪರ್ಧೆ ಯಲ್ಲಿ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆ ಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು.

 ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ 5ಗ್ರಾಂ ಚಿನ್ನ ಹಾಗೂ 3 ಗ್ರಾಂ.ಚಿನ್ನ, ತೃತೀಯ ಬಹುಮಾನ ರೂ.10 ಸಾವಿರ ನಗದು ವಿಜೇತರಿಗೆ ವಿತರಿಸಲಾಯಿತು. ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 20ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು.ಎತ್ತಿನ ಗಾಡಿ ಓಟವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಯಿತು.

ರೋಮಾಂಚನಕಾರಿ ಹಾಗೂ ಸಾಹಸಮಯ ಕ್ರೀಡೆಯಾದ ಎತ್ತಿನ ಗಾಡಿ ಸ್ಪರ್ಧೆ ವಿಕ್ಷೀಸಿಸಲು ಸಾವಿರಾರೂ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಧ್ಯಾಹ್ನ 2.00 ಘಂಟೆಗೆ ಎತ್ತಿನ ಗಾಡಿ ಸ್ಪರ್ಧೆ ಆರಂಭಗೊಂಡ ಸಂದರ್ಭ ರಸ್ತೆಯ ಇಕ್ಕೇಲಗಳಲ್ಲಿ ನಿಂತಿದ್ದ ಜನರು ಶೀಳೆ ಹೊಡೆಯುತ್ತ ಕೂಗುವ ಮೂಲಕ ಎತ್ತುಗಳಿಗೆ ಹುರಿದುಂಭಿಸುತ್ತಿದ್ದ ದೃಶ್ಯ ಎಲ್ಲೇಡೆ ಕಂಡು ಬರುತಿತ್ತು. ದಿನವಿಡೀ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಸಾಮೂಹಿಕವಾಗಿ ಪಾಲ್ಗೊಂಡಿದ್ದುದು ಕಂಡುಬಂದಿತು.

ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಉದ್ಯಮಿ ಮೋಹನ್ ಲಾಲ್ ಚೌದರಿ ಉದ್ಘಾಟಿಸಿದರು.

 ಈ ಸಂದರ್ಭ ಮಾದರಿ ಯುವಕ ಸಂಘದ ಗೌರವಾಧ್ಯಕ್ಷ ಎಚ್.ಎನ್.ರಾಜಶೇಖರ್,ಅಧ್ಯಕ್ಷ ಎಚ್.ಎಚ್.ಧನಂಜಯ,ಉಪಾಧ್ಯಕ್ಷ ಎಚ್.ಡಿ.ಪುಟ್ಟರಾಜ ಕಾರ್ಯದರ್ಶಿ ತನುಕುಮಾರ್,ಖಜಾಂಜಿ ಎಚ್.ಸಿ.ಸಂತೋಷ್ (ಪುಟ್ಟ),ಪದಾಧಿಕಾರಿಗಳಾದ ಎಚ್.ಎಸ್.ರಘು,ಹೆಚ್.ಜೆ.ರವಿ,ರವೀಂದ್ರ,ಬಾಲಾಜಿ,ಸುದರ್ಶನ್, ಅಭಿಲಾಷ್,ರಘುಜವರೇಗೌಡ,ಬಿ.ಡಿ.ಗಣೇಶ್, ಸಂಜಯ್,ಗುರುಪ್ರಸಾದ್,ಕಿರಣ್, ಚಂದನ್,ಎಚ್.ಆರ್.ಸಂತೋಷ್, ಸತೀಶ್, ಚರಣ್,ದಿನೇಶ್,ಅಕ್ಷಯಕುಮಾರ್,ಪ್ರವೀಣ್,ಎಚ್.ಆರ್.ರಾಜು,ಕಿರಣ್,ಲೋಕೇಶ್, ಎಸ್.ಬಸವರಾಜು ಸಲಹೆಗಾರರಾದ ಶಿಕ್ಷಕರಾದ ಎಚ್.ಕೆ.ರಾಜಕುಮಾರ್,ಹೆಚ್.ಜೆ.ಕುಮಾರ್, ಎಚ್.ಎನ್.ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘು ಇದ್ದರು.ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಬೋಜೇಗೌಡ,ಪ್ರವೀಣ್ ,ಸಂತೋಷ್ ಕಾರ್ಯನಿರ್ವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0