ಮದೆನಾಡಿನಲ್ಲಿ ಫೆ.22 ರಂದು ಹಿಂದೂ ಸಂಗಮ; ಹಿಂದೂ ಸಮಾವೇಶ

ಮದೆನಾಡಿನಲ್ಲಿ ಫೆ.22 ರಂದು ಹಿಂದೂ ಸಂಗಮ; ಹಿಂದೂ ಸಮಾವೇಶ

ಮಡಿಕೇರಿ ಫೆ.20 - ಮಾತ್ರಭೂಮಿ ಸಂರಕ್ಷಣೆಯ ಜಾಗ್ರತಿ ಸಂದೇಶದ ಉದ್ದೇಶದಿಂದ ಆಯೋಜಿತ ಹಿಂದೂ ಸಂಗಮ ಕಾಯ೯ಕ್ರಮವು ಫೆ.22 ರಂದು ಮದೆನಾಡು ಗ್ರಾಮದಲ್ಲಿ ಮದೆನಾಡು ಮಂಡಲದ ಹಿಂದೂ ಸಂಗಮ ಸಮಿತಿಯಿಂದ ಆಯೋಜಿತವಾಗಿದೆ.

ಫೆ.22 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಮದೆ ಬಿಜಿಎಸ್ ಶಾಲೆಯ ಕೆಳಭಾಗದ ಪಾರ್ಕಿಂಗ್ ಜಾಗ ಕಾಫಿ ಬಿನ್ ರೆಸಾರ್ಟ್ ನ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದೆನಾಡಿಗೆ ಶೋಭಾ ಯಾತ್ರೆಯು ಸಾಗಿ ಬರಲಿದೆ. ಶೋಭಾ ಯಾತ್ರೆಯಲ್ಲಿ ಕುಣಿತ ಭಜನೆ ಸಿಂಗಾರಿ ಮೇಳ ಮೇಳೈಸಲಿದ್ದು, ಸಂಜೆ 4:30 ಗಂಟೆಗೆ ಮದೆ ಪೇಟೆಯ ಸೊಸೈಟಿಯ ಪಕ್ಕದ ತುರ್ತಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ.

 ಈ ಹಿಂದೂ ಸಂಗಮದಲ್ಲಿ ಮದೇನಾಡು ,ಕಾಟಕ್ಕೇರಿ, ತಾಳತ್ತ ಮನೆ, ಅವಂದೂರು, ಬೆಟ್ಟತ್ತೂರು, ಜೋಡುಪಾಲ ,ದೇವರಕೊಲ್ಲಿ, ಎರಡನೇ ಮೊಣ್ಣಂಗೇರಿ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಹಿಂದೂ ಸಮಾಜದ ಸಾಮರಸ್ಯ, ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ತಿಳಿಸಿದೆ.