ಫೆ.01ರಂದು ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಫೆ.01ರಂದು ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಸೋಮವಾರಪೇಟೆ: ಹಿಂದುತ್ವದ ಉಳಿವಿಗಾಗಿ,ಈ ರಾಷ್ಟ್ರದ ರಕ್ಷಣೆಗಾಗಿ,ಹಿಂದೂರಕ್ಷಣೆಯ ಸಂಕಲ್ಪದೊಂದಿದೆ ಹಿಂದು ಸಂಗಮ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು ಸರ್ವರು ಪಾಲ್ಗೊಳ್ಳಬೇಕೆಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಟಿ.ಸನತ್ ತಿಳಿಸಿದ್ದಾರೆ.

 ಫೆಬ್ರವರಿ 1ರ ಭಾನುವಾರ ಪಟ್ಟಣದಲ್ಲಿ ಆಯೋಜಿಸಿರುವ ನಗರದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಿಂದು ಸಮಾಜದಲ್ಲಿ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ದೇಶಭಕ್ತಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಂದು ಕೆ.ಟಿ. ಸನತ್ ಹೇಳಿದರು.

ಕಾರ್ಯಕ್ರಮದ ತಾಲೂಕು ಆಯೋಜಕ ಬಿ. ಎ.ಭಾಸ್ಕರ್ ಮಾತನಾಡಿ ಸಮಾಜದಲ್ಲಿನ ಎಲ್ಲಾ ಜನಾಂಗ ಬಾಂಧವರನ್ನು ಒಗ್ಗೂಡಿಸಿಕೊಂಡು ಆಚರಿಸುವ ಆಚರಣೆಯ ಮೂಲಕ ಹಿಂದೂ ಸಂಘಟನೆಗಳಿಗೆ ಬಲ ತುಂಬುವುದು. ಶಿಸ್ತು, ದೇಶಾಭಿಮಾನ, ಧೈರ್ಯ, ಪ್ರಾಮಾಣಿಕತೆಯಿಂದ ಕೂಡಿದ ಸಂಪನ್ಮೂಲ ವ್ಯಕ್ತಿಗಳ ನಿರ್ಮಾಣ ಮಾಡುವ ಮೂಲಕ ಸಮಾಜವನ್ನು ಸದೃಢಗೊಳಿಸುವ ಪ್ರಯತ್ನ ಇದಾಗಲಿದೆ. ಸಮಾಜದಲ್ಲಿ ಸಮರಸತೆಯ ಬದುಕನ್ನು ರೂಪಿಸುವುದು, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ, ಸಮಾಜದಲ್ಲಿ ಸಮಾರಸ್ಯ, ನಾಗರಿಕ ಶಿಷ್ಟಾಚಾರಗಳನ್ನು ಮೈಗೂಡಿಸುಂತೆ ಮಾಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸುವ ಕಾರ್ಯ ಈ ಆಚರಣೆಯ ಮೂಲಕ ಮಾಡುವುದಾಗಿದೆ ಎಂದರು.

 ಸೋಮವಾರಪೇಟೆ ನಗರದಲ್ಲಿ ಫೆ. ೧ರ ಭಾನುವಾರ ಹಿಂದು ಸಂಗಮ ಕಾರ್ಯಕ್ರಮ ನಿಗದಿಯಾಗಿದ್ದು, ಅಂದು ಬೆಳಗ್ಗೆ ೯.೩೦ ಗಂಟೆಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಹೊರಡಲಿರುವ ಶೋಭಾ ಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಚನ್ನಬಸಪ್ಪ ಸಭಾಂಗಣದ ಸಮೀಪದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಸಮಾಪನಗೊಳ್ಳಲಿದೆ.

ನಂತರ ೧೧.೩೦ಕ್ಕೆ ಮೈದಾನದಲ್ಲಿನ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಳ್ಳುರು ಮಠದ ಧರ್ಮಗುರುಗಲಾದ ಶ್ರೀ.ಶ್ರೀ.ಸ್ವತಂತ್ರ ಬಸವಲಿಂಗ ಸ್ವಾಮೀಜಿ,ಸಾನಿಧ್ಯ ವಹಿಸಲಿರುವ ಕಾರ್ಯಕ್ರಮದಲ್ಲಿ ಪ್ರಾಂತ ಪ್ರಚಾರಕರಾದ ಶ್ರೀ.ಗುರುಪ್ರಸಾದ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

 ಸಭೆಯಲ್ಲಿ ತಾಲೂಕು ಗೌರವಾಧ್ಯಕ್ಷರಾದ ಎಸ್.ಎಲ್. ಸೀತಾರಾಮ್, ಕಾರ್ಯದರ್ಶಿ ಎಸ್. ಎನ್. ಸೋಮಶೇಖರ್,ನಗರಾಧ್ಯಕ್ಷ ಎನ್.ಎನ್.ದಯಾನಂದ, ಸಮಿತಿ ಸದಸ್ಯರಾದ ಬನ್ನಳ್ಳಿ ಗೋಪಾಲ್, ಹಾಗೂಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.