ಕಾಕೋಟುಪರಂಬುವಿನಲ್ಲಿ‌ ಹಿಂದೂ ಸಂಗಮ ಕಾರ್ಯಕ್ರಮ

Jan 29, 2026 - 10:43
 0  702
ಕಾಕೋಟುಪರಂಬುವಿನಲ್ಲಿ‌ ಹಿಂದೂ ಸಂಗಮ ಕಾರ್ಯಕ್ರಮ

ವಿರಾಜಪೇಟೆ; ವಿವಿಧತೆಯಲ್ಲಿ ಏಕತೆ ಕಂಡ ಮಹಾನ್ ದೇಶ. ವಿಶ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಧೀಮಂತ ಸಂಸ್ಕಾರವನ್ನು ವಿಶ್ವಕ್ಕೆ ತಿಳಿಸಿದ ದೇಶ ಅಖಂಡ ಭಾರತ. ಭೌವ್ಯ ಪರಂಪರೆಯ ಉಳಿವಿಗಾಗಿ ಹಿಂದೂ ಬಾಂಧವರು ಒಂದಾಗೋಣ ಎಂದು ಮಂಗಳೂರು ವಿಭಾಗ ಸಹ ಪ್ರಾಂತ ಕಾರ್ಯವಾಹ ಸುಬ್ರಮಣ್ಯ ಬರಣಿಕೆರೆ ಅವರು ಹೇಳಿದರು.

 ಹಿಂದೂ ಸಂಗಮ ಆಯೋಜನ ಸಮಿತಿ ವಿರಾಜಪೇಟೆ ತಾಲೂಕು, ಕಾಕೋಟುಪರಂಬು ಮಂಡಲದ ವತಿಯಿಂದ ಕಾಕೋಟುಪರಂಬು ಮೈದಾನದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.

 ದಿಕ್ಸೂಚಿ ಭಾಷಣ ಮಾಡಿದ ಸುಬ್ರಮಣ್ಯ ಅವರು ಸನಾತನ ಧರ್ಮ ಬಹು ಇತಿಹಾಸ ಉಳ್ಳ ಸಂಸ್ಕೃತಿ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ತಂತ್ರಜ್ಞಾನದ ಪರಿಕಲ್ಪನೆಯನ್ನು ಹೊಂದಿ ಸಹಕಾರಗೊಳಿಸಿದ್ದಾರೆ. ಅಂದೂ ಹೊಂದಿದ್ದ ಪರಿಕಲ್ಪನೆಯು ಇಂದು ಆಧುನಿಕ ಭಾರತದ ಚಿತ್ರಣದಲ್ಲಿ ಹೊಸ ಭಾಷ್ಯ ಬರೆಯಲಾಗಿದೆ.

ಮಹಾಭಾರತ ರಾಮಾಯಣ ಭಾರತದಲ್ಲಿ ಹುಟ್ಟಿದರು. ಇಂದು ವಿಶ್ವವ್ಯಾಪಿಯಾಗಿದೆ. ವಿಶ್ವದ ಕೆಲವು ಮುಸ್ಲಿಂ ರಾಷ್ಟೃಗಳು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಅನ್ಯ ಮತೀಯರು ವಿವಿಧತೆಯಲ್ಲಿ ಏಕತೆ ಕಂಡ ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಸನಾತನ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಇದು ನಮಗೆ ಹೆಮ್ಮೆ. ಇಂತಹ ಸಂಸ್ಕತಿಯನ್ನು ಹೊಂದಿರುವ ನಾವುಗಳು ಜಾತಿ ವ್ಯವಸ್ಥೆಯಲ್ಲಿ ಹಂಚಿಹೋಗಿದ್ದೇವೆ.

ರಾಜಕೀಯ ಬೇಳೆ ಬೇಯಿಸಲು ಜಾತಿ ಎಂಬ ಆಸ್ತೃವನ್ನು ಬಳಸಿ ಒಡೆದು ಆಳುವ ಪದ್ದತಿ ಅನುಸರಿಸಿಕೊಂಡು ಬಂದಿರುವುದು ಖೇದಕರ ವಿಷಯ. ಸ್ಮಶಾನ, ದೇಗುಲ, ಜಲ, ನೆಲೆಕ್ಕೆ ತೆರಳುವುದಕ್ಕೆ ವಿರೋಧ ವ್ಯಕ್ತಪಡಿಸದೆ ನಾವೆಲ್ಲ ಒಂದು... ನಾವೆಲ್ಲ ಹಿಂದೂ... ಎಂಬ ಪರಿಕಲ್ಪನೆ ಸಹಕಾರವಾಗಲು ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಪಠಣವಾಗಬೇಕು. ಈ ನಿಟ್ಟಿನಲ್ಲಿ ಹಿಂದೂಗಳ ಸಂಗಮದೊಂದಿಗೆ ಜಾಗೃತ ಹಿಂದೂ ಸಮಾಜ ನಿರ್ಮಾಣವಾಗಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಮಾಜಿ ಜಿಲ್ಲಾ‌ ಭಾ.ಜ.ಪ ಅಧ್ಯಕ್ಷರಾದ ಪಾಳೆಯಂಡ ರಾಬೀನ್ ದೇವಯ್ಯ ಅವರು ಪ್ರಾಸ್ತಾವಿಕ ಭಾಷಣದಲ್ಲಿ, ಸನಾತನ ಧರ್ಮ ಉಳಿವಿಗಾಗಿ ಧೀಮಂತ ಸಂಸ್ಕತಿ, ಸಂಸ್ಕಾರ ಉಳಿವಿಗಾಗಿ ಹೋರಾಟದ ಮೂಲಕ ಸಂಘ ಶತಪ್ರಯತ್ನದೊಂದಿಗೆ 100 ವರ್ಷಗಳನ್ನು ಪೂರೈಸಿದೆ.

 ಹಿಂದೂ ಧರ್ಮ ಉಳಿವಿಗಾಗಿ ಸಹಸ್ರಾರು ಬಾಂಧವರು ತ್ಯಾಗ ಬಲಿದಾನಗಳನ್ನ ಮಾಡಿದ್ದಾರೆ. ಹಿಂದೂ ಧರ್ಮದ ವಿವಿಧ ಜಾತಿಗಳ ಮಧ್ಯೆ ಸಾಮರಸ್ಯ ಬಾಂಧವ್ಯ ಬೆಸೆಯಲು ಇಂದಿಗೂ ಶ್ರಮಿಸುತ್ತಿದೆ. ನೂರಾರು ವರ್ಷಗಳು ಪರಿಕೀಯರು ಭಾರತದ ಸಂಸ್ಕೃತಿಯ ಮೇಲೆ ಧಾಳಿ ನಡೆಸಿದರು.

ಸಂಸ್ಕಾರ ಇಂದಿಗೂ ಮರೆಮಾಚಲಾಗಲಿಲ್ಲ. ಒಳನುಸಳುವಿಕೆ, ಜಾತಿ ಜಾತಿಗಳ ಮಧ್ಯೆ ಕಂದಕ ನಿರ್ಮಾಣ, ಉಗ್ರವಾದಿತ್ವ, ಹೊಸದಾಗಿ ಲವ್ ಜಿಹಾದ್ ನಂತಹ ಕ್ರೂರಿ ಕ್ರಮಗಳನ್ನು ದೇಶದಲ್ಲಿ ಹರಡಿ ನುಚ್ಚುನೂರು ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ದಮ ಮತಾಂದ ಶಕ್ತಿಗಳ ವಿರುದ್ದ ಹೋರಾಟ ಮಾಡಲು ಸರ್ವ ಹಿಂದೂ ಬಾಂಧವರು ಒಂದಾಗಬೇಕು. ಭವ್ಯ ಹಿಂದೂ ರಾಷ್ಟ್ರದ ನಿರ್ಮಾಣ ಮಾಡುವತ್ತಾ ನಮ್ಮ ಗುರಿ ಎಂದು ಎದೆತಟ್ಟಿ ಹೇಳುವಂತಾಗಲು ಹಿಂದೂ ಸಂಗಮದ ಅಯೋಜನೆಯಾಗಿದೆ. ಎಂದು ಹೇಳಿದರು.

 ಕಾರ್ಯಕ್ರಮ ಉದ್ದೇಶಿಸಿ ಹಿಂದೂ ಸಂಗಮ ಆಯೋಜನ ಸಮಿತಿಯ ವಿರಾಜಪೇಟೆ ತಾಲೂಕು ಸಂಚಾಲಕರಾದ ಕುಪ್ಪಂಡ ರಾಜು ಕಾರ್ಯಪ್ಪ ಅವರು ಮಾತನಾಡಿದರು.ವೇದಿಕೆಯಲ್ಲಿ ಹಿರಿಯ ಸಂಘ ಕಾರ್ಯಕರ್ತರರಾದ ಚರ್ಮಂಡ ಅಪ್ಪುಣು ಅವರು ಉಪಸ್ಥಿತರಿದ್ದರು.

ಕಟ್ಟೇರ ಮೊಟ್ಟೆಯಿಂದ ಆರಂಭವಾದ ಶೊಭಾಯಾತ್ರೆಯು ಕಾಕೋಟುಪರಂಬು ಮೈಧಾನದಲ್ಲಿ ಕೊನೆಗೊಂಡಿತ್ತು. ಶೋಭಾಯತ್ರೆಯಲ್ಲಿ ಕಾಕೋಟುಪರಂಬು ವ್ಯಾಪ್ತಿಯ ನಾಲ್ಕು ಗ್ರಾಮಗಳ ಮಹಿಳೆಯರು ಸೇರಿದಂತೆ ಹಿಂದೂ ಬಾಂದವರು ಭಾಗವಹಿಸಿದ್ದರು.

ಅಮ್ಮಂಡಿರ ಗಣಪತಿ, ಕುಂಞರ ಭೀಮಯ್ಯ, ಅವರು ಸೇರಿದಂತೆ ಹಿಂದೂ ಸಂಗಮ ಅಯೋಜನಾ ಸಮಿತಿಯ ಸದಸ್ಯರು ಕಾಕೋಟುಪರಂಬು ಮಂಡಲದ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವಿರಾಜಪೇಟೆ ಗ್ರಾಮಾಂತರ ಪೊಲೀಸು ಇಲಾಖೆ ಸಿಬ್ಬಂದಿಗಳ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತು ಕಲ್ಪಿಸಿದ್ದರು. ವರದಿ;

ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 0
Wow Wow 0