ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಮತಾಂತರದ ವಿರುದ್ಧ ಮತ್ತು ಲವ್ ಜಿಹಾದ್ ಪ್ರಕರಣವನ್ನು ಖಂಡಿಸಿ ಜ.27ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
admincoorgdaily

ಮಡಿಕೇರಿ: ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಮತಾಂತರದ ವಿರುದ್ಧ ಮತ್ತು ಲವ್ ಜಿಹಾದ್ ಪ್ರಕರಣವನ್ನು ಖಂಡಿಸಿ ಜ.೨೭ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸುರಕ್ಷಾ ಸಮಿತಿ ಸಂಯೋಜಕ ಕುಕ್ಕೆರ ಅಜಿತ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೧೦.೩೦ ಗಂಟೆಗೆ ಸಿದ್ದಾಪುರ ಅಯ್ಯಪ್ಪ ದೇವಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಸಾಗಿನಂತರ ೧.೩೦ ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಜನಾಕ್ರೋಶ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಅನ್ಯ ಧರ್ಮದ ಯುವಕರು ಹಿಂದೂ ಧರ್ಮದ ಹೆಣ್ಣು ಮಕ್ಕಳೊಂದಿಗೆ ಪ್ರೀತಿ ಪ್ರೇಮದ ನಾಟಕದ ಮೂಲಕ ಅವರನ್ನು ತಮ್ಮ ಬಲೆಗೆ ಬೀಳಿಸಿ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ವಂಚನೆ ಮಾಡಿರುವ ಅನೇಕ ಪ್ರಕರಣಗಳು ಕೊಡಗು ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಕೇರಳ ರಾಜ್ಯವೊಂದರಲ್ಲೇ ೨೦೦೯ ರಿಂದ ಈಚೆಗೆ ೫೦೦೦ಕ್ಕೂ ಹೆಚ್ಚು ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಿರುವ ಮಾಹಿತಿಯಿದೆ. ಒಂದು ಮೂಲಗಳ ಪ್ರಕಾರ ಈತನಕ ೩೦,೦೦೦ಕ್ಕೂ ಅಧಿಕ ಹುಡುಗಿಯರನ್ನು ಲವ್ ಜಿಹಾದ್ ಮೂಲಕ ಇಸ್ಲಾಮಿಗೆ ಮತಾಂತರಿಸಲಾಗಿದೆಯೆಂಬ ಮಾಹಿತಿಯಿದೆ. ಲವ್ ಜಿಹಾದ್ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸಲು ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಸುರಕ್ಷಾ ಸಮಿತಿ ಪ್ರಮುಖರಾದ ಸಂತೋಷ್, ಪಿ.ವಿ.ರಮೇಶ್, ಟಿ.ಎ.ಕುಮಾರ್, ಲಾಲಾ ಅಯ್ಯಣ್ಣ, ವೈ.ಪಿ.ಬೋಜೆಗೌಡ ಉಪಸ್ಥಿತರಿದ್ದರು.