ಚೋಕಂಡಳ್ಳಿಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಲಿಬಾಲ್ ಉತ್ತಮ ಆಟ:ಶಾಸಕ ಎಎಸ್ ಪೊನ್ನಣ್ಣ

ಚೋಕಂಡಳ್ಳಿಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ:  ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು  ವಾಲಿಬಾಲ್ ಉತ್ತಮ ಆಟ:ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ' ತಾಲೂಕಿನ ನಲ್ವತೋಕ್ಲು ಗ್ರಾಮದ ಚೋಕಂಡಳ್ಳಿಯಲ್ಲಿ ಆಯೋಜನೆಗೊಂಡ 3ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರುತ್ತಾ ಮಾತನಾಡಿದ ಶಾಸಕರು, ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ವಾಲಿಬಾಲ್ ಉತ್ತಮ ಆಟವಾಗಿದೆ.

 ಬುದ್ಧಿವಂತಿಕೆ, ಚುರುಕು ಹಾಗೂ ಒಗ್ಗಟಿನ ಆಟ ಇದಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲೂ ಇದು ಅತ್ಯಂತ ಸಹಕಾರಿ. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿ, ಯಶಸ್ಸು ಕಂಡು ನಾಡಿಗೆ ಒಳ್ಳೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟದ ಅಧ್ಯಕ್ಷರು ಕೊಳುಮಂಡ ರಫೀಕ್, ಪ್ರಮುಖರು ಹಾಲಿ ಹಾಜಿ, ಬೀಳುಗುಂದ ಪಂಚಾಯತ್ ಮಾಜಿ ಸದಸ್ಯರು ಕಾವೇರಪ್ಪ, ಮಾಜಿ ಪುರಸಭೆ ಸದಸ್ಯರು ರಾಫಿ, ಮತೀನ್, ಹಾಗೂ ಶೈಯದ್ ರವರು ಉಪಸ್ಥಿತರಿದ್ದರು.