ಸಿದ್ದಾಪುರದಲ್ಲಿ ಬೃಹತ್ ಇಫ್ತಾರ್ ಸಂಗಮ

ಸಿದ್ದಾಪುರದಲ್ಲಿ  ಬೃಹತ್ ಇಫ್ತಾರ್ ಸಂಗಮ

ಸಿದ್ದಾಪುರ:- ಮುಸ್ಲಿಂ ಜಮಾಅತ್ ಕಮಿಟಿ ಸಹಕಾರದೊಂದಿಗೆ ಮುಸ್ಲಿಂ ಯೂಥ್ ಮುಮೆಂಟ್ ಸಂಘಟನೆ ರಂಜಾನ್ ಉಪವಾಸ ಆಚರಣೆಯ ಅಂಗವಾಗಿ ಬೃಹತ್ ಇಫ್ತಾರ್ ಸಂಗಮವನ್ನು ಮುನ್ವವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ಆಯೋಜಿಸಲಾಗಿತ್ತು.

ಉಪವಾಸ ನಿರತ ಬಾಂಧವರಿಗೆ ಇಫ್ತಾರ್ ಕೂಟದಲ್ಲಿ ಆಯೋಜಿಸಲಾಗಿದ್ದ ಸಂಗಮದಲ್ಲಿ ಅರೆಕಾಡು,ನಲ್ವತ್ತೆಕ್ರೆ,ಸಿದ್ದಾಪುರ ,ನೆಲ್ಯಹುದಿಕೇರಿ,ಗುಯ್ಯ,ಒಂಟಿಯಂಗಡಿ, ಇಂಜಲಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಾಂದವರು ಸೌಹಾರ್ದತವಾಗಿ ಪಾಲ್ಗೊಂಡಿದ್ದರು. ಇಫ್ತಾರ್ ನಲ್ಲಿ ವಿವಿಧ ಬಗ್ಗೆಯ ಹಣ್ಣು ಹಂಪಲು, ತಂಪು ಪಾನೀಯ, ತಿಂಡಿ ತಿನಿಸುಗಳೊಂದಿಗೆ ಬಿರಿಯಾನಿ ಊಟದ ವ್ಯವಸ್ಥೆಯು ಮಾಡಲಾಗಿತ್ತು.

ಮಹಲ್ ಖತೀಬ್ ನೌಫಲ್ ಹುದವಿ ಮಾತನಾಡಿ ಪವಿತ್ರ ರಂಜಾನ್, ಉಪವಾಸದ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ ಅವರು ವಿಶೇಷ ದುವಾ ಪ್ರಾರ್ಥನೆ ನೆರವೇರಿಸಿದರು.

ಮುಸ್ಲಿಂ ಜಮಾಆತ್ ಉಪಾಧ್ಯಕ್ಷ ಕೆ ಯು ಅಬ್ದುಲ್ ಮಜೀದ್ ಮಾತನಾಡಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಯೂತ್ ಮೂವ್ಮೆಂಟ್ ಆರೋಗ್ಯ, ಶೈಕ್ಷಣಿಕ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಯುವ ಸಮೂಹವನ್ನ ಒಗ್ಗೂಡಿಕೆಯೊಂದಿಗೆ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಾದರಿಯಾಗಿರುವ ಯೂಥ್ ಮೊಮೆಂಟ್ ಸಂಘಟನೆ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವುದರ ಮೂಲಕ ಬಾಂಧವರನ್ನ ಒಗ್ಗೂಡಿಸಿ ಸೌಹಾರ್ದ ಸಂಗಮ ನಿರ್ಮಾಣ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಮಾಜಿ ಅಧ್ಯಕ್ಷ ವಿ ಕೆ ಬಶೀರ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಬೃಹತ್ ಇಫ್ತಾರ್ ಕೂಟವನ್ನ ಆಯೋಜಿಸಲಾಗಿದೆ ಎಂದರು.

ಮುಸ್ಲಿಂ ಯುತ್ ಮುಮೆಂಟ್ ಅಧ್ಯಕ್ಷ ಸಲಾಂ ಮಾತನಾಡಿ ಬಾಂಧವರ ಸಹಕಾರದಿಂದ ರಂಜಾನ್ ಇಫ್ತಾರ್ ಕೂಟವನ್ನ ಆಯೋಜಿಸಲಾಗಿದ್ದು ಸುತ್ತಮುತ್ತಲ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇಫ್ತಾರ್ ಸಂಗಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು ಎಂ ಮುಸ್ತಫಾ ಹಾಜಿ, ಕಾರ್ಯದರ್ಶಿ ರೌವೂಫ್ ಹಾಜಿ, ಸಂಸಲ್ ಉಲಮ ಎಜುಕೇಶನಲ್ ಅಕಾಡೆಮಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ನೈಮ ಸಂಘಟನೆ ಅಧ್ಯಕ್ಷ ಒಎಂ ನೌಶಾದ್, ಪ್ರಮುಖರಾದ ಎ ಕೆ ಹಕೀಂ, ಅಸ್ಕರ್, ನವಾಜ್, ಸರ್ಪು, ಅಯಾಜ್, ಕರೀಂ, ಹ್ಯಾರಿಸ್, ಮುಸ್ಲಿಂ ಯುತ್ ಮುಮೆಂಟ್ ಕಾರ್ಯದರ್ಶಿ ಜಿಬಿನ್, ಖಜಾಂಜಿ ಸಿದ್ದೀಕ್, ಸೇರಿದಂತೆ ಸುತ್ತಮುತ್ತಲ ಗ್ರಾಮದ ಮಹಲ್ಗಳ ಮುಖಂಡರುಗಳು, ಪದಾಧಿಕಾರಿಗಳು ಯೂತ್ ಮೂಮೆಂಟ್ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.