ಸ್ನೇಹಿತರೊಂದಿಗೆ ಸೆಕ್ಸ್ ಮಾಡು ಎಂದು ಪೀಡಿಸುತ್ತಿದ್ದ ಪತಿ, ಬೆಡ್ ರೂಮಿನಲ್ಲಿತ್ತು ರಹಸ್ಯ ಕ್ಯಾಮೆರಾ! ಖಾಸಗಿ ಕ್ಷಣಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ವಿಕೃತ ಕಾಮಿ

Oct 3, 2025 - 17:12
 0  3.5k
ಸ್ನೇಹಿತರೊಂದಿಗೆ ಸೆಕ್ಸ್ ಮಾಡು ಎಂದು ಪೀಡಿಸುತ್ತಿದ್ದ ಪತಿ, ಬೆಡ್ ರೂಮಿನಲ್ಲಿತ್ತು ರಹಸ್ಯ ಕ್ಯಾಮೆರಾ!  ಖಾಸಗಿ ಕ್ಷಣಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ವಿಕೃತ ಕಾಮಿ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪುಟ್ಟೇನಹಳ್ಳಿಯಲ್ಲಿ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ–ಮಾವನ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ. ದೂರಿನಲ್ಲಿ ಕಿರುಕುಳ, ಶೋಷಣೆ, ಬ್ಲಾಕ್‌ಮೇಲ್ ಹಾಗೂ ಗೌಪ್ಯತೆ ಉಲ್ಲಂಘನೆ ಸಂಬಂಧಿತ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಮಹಿಳೆ 2024ರಲ್ಲಿ ಸೈಯದ್ ಇನಾಮುಲ್ ಹಕ್ ಎಂಬಾತನನ್ನು ವಿವಾಹವಾಗಿದ್ದು, ಮದುವೆ ವೇಳೆ 340 ಗ್ರಾಂ ಚಿನ್ನಾಭರಣ ಮತ್ತು ಯಮಹಾ ಬೈಕ್ ನೀಡಲಾಗಿತ್ತು. ಆದರೆ ಮದುವೆಯ ಬಳಿಕ ಸೈಯದ್ ಈಗಾಗಲೇ ವಿವಾಹವಾಗಿರುವುದು ಬಹಿರಂಗವಾಗಿದೆ. ಅಲ್ಲದೆ, ತನಗೆ 19 ಮಹಿಳೆಯರೊಂದಿಗೆ ಸಂಬಂಧವಿದೆ, ನೀನು ನನ್ನ ಎರಡನೇ ಪತ್ನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಸೈಯದ್ ತನ್ನ ಬೆಡ್ರೂಮಿನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ವಿದೇಶದಲ್ಲಿರುವ ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ. ಅಲ್ಲದೆ ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪತ್ನಿಯನ್ನು ಬಲವಂತಪಡಿಸಿದ್ದಾನೆ. ನಿರಾಕರಿಸಿದಾಗ ಖಾಸಗಿ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಸ್ಥಳಗಳು, ಹೋಟೆಲ್‌ಗಳು ಹಾಗೂ ಹೆತ್ತವರ ಮನೆಯಲ್ಲಿ ಸಹ ಪತಿ ಪದೇ ಪದೇ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾನೆಂದು ಮಹಿಳೆ ಹೇಳಿದ್ದಾರೆ. ಫ್ಲಾಟ್ ಖರೀದಿಸಲು ಪತ್ನಿಯ ಚಿನ್ನಾಭರಣ ಮಾರಾಟಕ್ಕೆ ಒತ್ತಡ ಹೇರಿ, ನಿರಾಕರಿಸಿದಾಗ ಹಲ್ಲೆ ನಡೆಸಿದ್ದಾನೆಂಬ ಆರೋಪವೂ ದಾಖಲಾಗಿದೆ.

ದೂರುದಲ್ಲಿ ಅತ್ತೆ–ಮಾವನ ಹೆಸರೂ ಸೇರಿದ್ದು, ಫೆಬ್ರವರಿಯಲ್ಲಿ ನಡೆದ ಒಂದು ಕುಟುಂಬ ಕಾರ್ಯಕ್ರಮದಲ್ಲಿ ಪತಿಯ ಸಹೋದರಿ ತಮಗೆ ಅವಮಾನ ಮಾಡಿದ್ದಾಳೆ. ಇದೇ ವೇಳೆ ಸೋದರ ಮಾವ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 21ರಂದು ಗೃಹ ಕಲಹದ ಸಂದರ್ಭ ಪತಿ ಹಲ್ಲೆ ನಡೆಸಿ ಮನೆಯಿಂದ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪತಿ ಹಾಗೂ ಇತರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 10
Sad Sad 7
Wow Wow 3