ವಲಸೆ ಕಾರ್ಮಿಕರಿಂದ ಹೆಚ್ಚುತ್ತಿರುವ ದೌರ್ಜನ್ಯ; ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕೊಡಗು ಹಿತರಕ್ಷಣಾ ವೇದಿಕೆ

Mar 10, 2026 - 19:33
 0  203
ವಲಸೆ ಕಾರ್ಮಿಕರಿಂದ ಹೆಚ್ಚುತ್ತಿರುವ ದೌರ್ಜನ್ಯ; ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕೊಡಗು ಹಿತರಕ್ಷಣಾ ವೇದಿಕೆ

ಮಡಿಕೇರಿ: ಜಿಲ್ಲೆಯಲ್ಲಿ ಅಸ್ಸಾಂ ಹಾಗೂ ಇನ್ನಿತರ ಕಡೆಗಳಿಂದ ಬಂದಂತಹ ವಲಸೆ ಕಾರ್ಮಿಕರಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾರುಕಟ್ಟೆಯಲ್ಲಿ ಮಾರುತ್ತಿರುವ ತಂಬಾಕು ಉತ್ಪನ್ನಗಳ ಹಾಗೂ ಇನ್ನಿತರ ವಸ್ತುಗಳ ಮಾರಾಟದಿಂದಾಗಿ ಕೊಡಗು ಜಿಲ್ಲೆಯ ಜನತೆಯ ಮೇಲೆ ಆಗುತ್ತಿರುವ ದುಷ್ಪರಿಣಾಮವಾಗುತ್ತಿದೆ ಎಂದು ಕೊಡಗು ಹಿತರಕ್ಷಣಾ ವೇದಿಕೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 ಗ್ರಾಮಿಣ ಭಾಗದಲ್ಲಿ ಸಂಜೆಯ ಸಮಯ ಮದ್ಯಪಾನ ಮಾಡಿ, ಸ್ಥಳೀಯರಿಗೆ ಕಿರಿ ಕಿರಿ ಉಂಟು ಮಾಡಿತ್ತಿರುವುದು ಕಂಡು ಬರತ್ತಿದೆ. ಜಿಲ್ಲೆಯ ಹಲವು ಮಾರುಕಟ್ಟೆಯಲ್ಲಿ ಇವರುಗಳು ವ್ಯಾಪಾರಕ್ಕೆ ಇಳಿದು ಅಶುಚಿತ್ವವಾದ ತಿಂಡಿ ತಿನಿಸುಗಳನ್ನು ಮಾರುತ್ತಿದ್ದಾರೆ. ಹಾಗೂ ಇದಕ್ಕೆ ಯಾವುದೇ ಆಹಾರ ಇಲಾಖೆಯ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ‌ ಎಂದು ಆರೋಪಿಸಿದ್ದಾರೆ.

ತಂಬಾಕು ಉತ್ಪನ್ನಗಳಾದ ಗುಡ್ಕ ಬೀಡಿ ಸಿಗರೇಟ್‌ಗಳನ್ನು ಕೂಡ ಮಾರುತ್ತಿದ್ದಾರೆ , ಇವರುಗಳಲಿ ಕೆಲವರು ಅಪರಾಧ ಪ್ರಕರಣಗಳಲ್ಲಿ ಕೂಡ ಭಾಗಿಯಾಗಿದ್ದು ಮುಂದಿನ ದಿನಗಳಲ್ಲಿ ಕೊಡಗಿಗೆ ಮಾರಕವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಕೆಲ ದಿನಗಳ ಹಿಂದೆ ಸ್ಥಳಿಯ ವಾಹನ ಚಾಲಕನ ಮೇಲೆ ಹಲ್ಲೆ ಖಂಡಿಸಿ ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಅಪರ ಜಿಲ್ಲಾಧಿಕಾರಿಗಳು ಹಾಗು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಇವರುಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಇವರ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ರವಿಗೌಡ ಉಪಾಧ್ಯಕ್ಷರಾದ ನಾಗೇಶ್ ಕಾರ್ಯದರ್ಶಿಗಳಾದ ಅಕ್ಷಿತ್. ಮಹಿಳಾ ಘಟಕದ ಕಾರ್ಯದರ್ಶಿಗಳಾದ ಲಿಲ್ಲಿಗೌಡ. ಎನ್‌ಸಿಐಬಿ ಯ ಜಾನ್ಸನ್ ಪ್ರವೀಣ್ ,ಸಮಿತಿ ಸದಸ್ಯರುಗಳಾದ ಪುನೀತ್, ಕಿರಣ್ ಹಾಗೂ ಇನ್ನೂ ಇತರರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0