ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು, ಬದಲಾಗುವ ಆದೇಶಗಳನ್ನು ನಿರಂತರ ಅಧ್ಯಯನ ವಕೀಲರ ಕರ್ತವ್ಯವಾಗಬೇಕು: ಶಾಸಕ ಎ.ಎಸ್. ಪೊನ್ನಣ್ಣ

ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು, ಬದಲಾಗುವ ಆದೇಶಗಳನ್ನು ನಿರಂತರ ಅಧ್ಯಯನ ವಕೀಲರ ಕರ್ತವ್ಯವಾಗಬೇಕು: ಶಾಸಕ ಎ.ಎಸ್. ಪೊನ್ನಣ್ಣ

ವಿರಾಜಪೇಟೆ:ಡಿ03: ನ್ಯಾಯಾಂಗ ವ್ಯವಸ್ಥೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಧನಿಕನವರೆಗೂ ಏಕಮುಖವಾಗಿದ್ದು, ವಕೀಲರು ನ್ಯಾಯಾಧೀಕರಣಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಕ್ಷಿದಾರ ಹಾಗೂ ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ನ್ಯಾಯ ಒದಗಿಸುವಂತಾಗಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.

ಬಾರ್ ಅಸೋಸಿಯೆಷನ್ ವಿರಾಜಪೇಟೆ ವತಿಯಿಂದ ನಗರದ ಹೊರವಲಯದ ಮ್ಯಾಗ್ನೋಲಿಯ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿತು. ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಮಾತನಾಡಿದ ಶಾಸಕರು.

 ವಕೀಲ ವೃತ್ತಿ ಅತ್ಯಂತ ಜವ್ದಾರಿಯುತ ಸ್ಥಾನ ಹೊಂದಿದೆ. ಸ್ವಾತಂತ್ರ ಹೋರಾಟಗಾರಲ್ಲಿ‌ ಧೀಮಂತ ವ್ಯಕ್ತಿಗಳು ಸಹ ವಕೀಲ ವೃತ್ತಿಯನ್ನು ಹೊಂದಿದ್ದರು. ಉಚ್ಚ ನ್ಯಾಯಾಲಯ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳು ಮತ್ತು ಬದಲಾಗುವ ಆದೇಶಗಳನ್ನು ನಿರಂತರ ಅಧ್ಯಯನ ಮಾಡುವುದರಿಂದ ವಕೀಲ ವೃತ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊತ್ತದೆ. ಸಾಮಾನ್ಯ ವ್ಯಕ್ತಿಗೆ ನ್ಯಾಯ ದೊರಕದಿದ್ದಾಗ ನೇರವಾಗಿ ನ್ಯಾಯಾಲಯಕ್ಕೆ ಆಗಮಿಸುತ್ತಾನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡ ವ್ಯಕ್ತಿ ಪರ್ಯಾಯವಾಗಿ ಭೂಗತ ಲೋಕ ಮತ್ತು ಪೊಲೀಸು ನೆರವು ಪಡೆಯಲು ಮುಂದಾಗುತ್ತಾನೆ.

 ವಕೀಲರು ತನ್ನ ಕಕ್ಷಿದಾರರು ಮತ್ತು ಸಮಾಜಕ್ಕೆ ನ್ಯಾಯ ಸಮ್ಮತವಾದ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ನ್ಯಾಯಾಲದಿಂದ ವಿಶ್ವಾಸ ಕಳೆದುಕೊಂಡ ಸಂದರ್ಭದಲ್ಲಿ ವಕೀಲರು ವಿಶ್ವಾಸವನ್ನು ಮರು ಸ್ಥಾಪನೆ ಮಾಡಲು ಪ್ರಯತ್ನ ಮಾಡಬೇಕು ಎಂದ ಶಾಸಕ ಎಎಸ್ ಪೊನ್ನಣ್ಣ ಅವರು, ವಿರಾಜಪೇಟೆ ಬಾರ್ ಕೌನ್ಸಿಲ್ ತುಂಬಾ ಹಳೆಯದಾದ ಬಾರ್ ಕೌನ್ಸಿಲ್ ಆಗಿದ್ದು. ಇದೆ ಬಾರ್ ಕೌನ್ಸಿಲ್‌ನಲ್ಲಿ ನನ್ನ ತಂದೆ ಮತ್ತು ತಾತಾ ಈರ್ವರು ಸೇವೆ ಸಲ್ಲಿಸಿದ್ದಾರೆ. ಎಂದು ಗತಕಾಲದ ನೆನಪುಗಳು, ಮತ್ತು ವಕೀಲ ವೃತ್ತಿಯಲ್ಲಿ ದೇಶದ ಹೆಸರಾಂತ ವಕೀಲರೊಂದಿಗೆ ಒಡನಾಟ ಹಾಗೂ ಅವರೊಂದಿಗಿದ್ದ ಅನುಭವವನ್ನು ಮೆಲಕು ಹಾಕಿದರು. ವಕೀಲರ ದಿನಾಚರಣೆಗಾಗಿ ಶುಭಕೋರಿದರು.

ಬಾರ್ ಕೌನ್ಸಿಲ್ ವಿರಾಜಪೇಟೆಯಲ್ಲಿ ಸೇವೆ ಸಲ್ಲಸಿದ ಹಿರಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸನ್ಮಾನಿಸಿ ಮಾತನಾಡಿದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌ. ನ್ಯಾಯಾಧೀಶರಾದ ನಟರಾಜ್ ಅವರು, ವಕೀಲರೆಂದರೆ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುವುದಲ್ಲಾ ಬದಲಿಗೆ ನ್ಯಾಯಕ್ಕೆ, ಸತ್ಯಕ್ಕೆ ನಿಷ್ಠೆಗೆ ಬದ್ಧರಾಗಿ ಸೇವೆ ಸಲ್ಲಿಸುವ ಸಮಾಜದ ವ್ಯಕ್ತಿಯಾಗಿರುತ್ತಾರೆ. ವಕೀಲರು ಹಾಗೂ ಬಾರ್ ಮತ್ತು ಬೆಂಚ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಸಮಾಜಕ್ಕೆ ಕೊಡುಗೆಗಳನ್ನು ನೀಡಲು ವಕೀಲರ ಮತ್ತು ನ್ಯಾಯಾಲಯದ ಸಹಕಾರ ಗಳು ಬಹುಮುಖ್ಯ ಎಂದು ಭಾವಿಸಬೇಕು. ವಕೀಲರ ದಿನಾಚರಣೆಯನ್ನು ಮುಂದೆ ಬರುವ ಎಲ್ಲಾ ವರ್ಷಗಳಲ್ಲಿ ಆಯೋಜಿಸುವಂತಾಗಬೇಕು ಇದರಿಂದ ವಕೀಲರ ಸಹಭಾಗಿತ್ವ ಹೆಚ್ಚುತ್ತದೆ ಎಂದು ಹೇಳಿದರು.

ಬಾರ್ ಅಸೋಸಿಯೇಷನ್ ವಿರಾಜಪೇಟೆ ಅಧ್ಯಕ್ಷರಾದ ಸಿ.ಕೆ.ಪೊನ್ನಣ್ಣ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ 1973 ರಲ್ಲಿ ಬಾಬು ರಾಜೇಂದ್ರ ಪ್ರಸಾದ್ ಅವರು ವಕೀಲರ ದಿನಾಚರಣೆಯನ್ನು ಆರಂಭಿಸಿದರು. ವಕೀಲರ ಕಾರ್ಯವೈಖರಿ, ಸಹಭಾಗಿತ್ವ, ಕಕ್ಷಿದಾರರೋಂದಿಗೆ ಒಲವು ಹಾಗೂ ಇತರ ಸಂಬಂಧಗಳನ್ನು ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ವಕೀಲ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿರಾಜಪೇಟೆ ಬಾರ್ ಅಸೋಸಿಯೇಷನ್ ನಲ್ಲಿ ಸೇವೆ ಸಲ್ಲಿಸಿದ ಮಾಜಿ ಅದ್ಯಕ್ಷರು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜೆ.ಎಂ.ಎಫ್.ಸಿ ವಿರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌ. ಆರ್. ಮಂಜುನಾಥ್, ಪ್ರಿನ್ಸಿಪಲ್ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ ವಿರಾಜಪೇಟೆ ಗೌ. ಪ್ರದೀಪ್ ಪೋತೆದಾರ್, ವಿರಾಜಪೇಟೆ ಬಾರ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಬಿ.ಎಸ್. ಸುಬ್ಬಯ್ಯ, ಕಾರ್ಯದರ್ಶಿಗಳಾದ ಎನ್.ಎಸ್ ಪ್ರಶಾಂತ್ ಉಪಸ್ಥಿತರಿದ್ದರು.

ವಕೀಲರಿಗಾಗಿ ಬೆಳಗ್ಗಿನಿಂದ ಸಂಜೆಯ ವರೆಗೆ ವಿವಿಧ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಸಂಘದ ಸದಸ್ಯರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ವಕೀಲರ ಸಂಘದ ಕಾರ್ಯದರ್ಶಿ ಗಳಾದ ಎನ್.ಎಸ್. ಪ್ರಶಾಂತ್ ಸ್ವಾಗತಿಸಿ ನಿರ್ದೇಶಕರಾದ ಅನುಪಮ ಕಿಶೋರ್ ನಿರೂಪಿಸಿ ವಿ.ಎಸ್. ಪ್ರೀತಂ ವಂದಿಸಿದರು,

ವಕೀಲರ ಸಂಘ ವಿರಾಜಪೇಟೆ ನಿರ್ಧೇಶಕರಾದ ಕೆ.ಸಿ. ಪ್ರದ್ಯುಮ್ನ, ಬಿ.ಟಿ ಗೀತಾ, ಸಿ.ಕೆ. ಪೊನ್ನಣ್ಣ, ಸಿ. ವಿಜಯಲಕ್ಷ್ಮಿ ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ