ಜಮಾಅತೇ ಇಸ್ಲಾಮಿ ಹಿಂದ್ ವತಿಯಿಂದ ಜಿಲ್ಲೆಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ತತ್ವ, ಸಂದೇಶ ಕುರಿತು ಜಾಗೃತಿ ಕಾರ್ಯಕ್ರಮ
admincoorgdaily
ಮಡಿಕೇರಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ತತ್ವ, ಸಂದೇಶ ಕುರಿತು ತಿಳಿವಳಿಕೆ ನೀಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ಮೈಸೂರು ವಲಯ ಸಂಚಾಲಕರಾದ ಯು.ಅಬ್ದುಸ್ಸಲಾಂ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮಿಯರಿಗೆ ಹಾಗೂ ಅನ್ಯ ಧರ್ಮಿಯರಿಗೆ ತಿಳಿವಳಿಕೆ ನೀಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಸೆ.೧೪ ರವರೆಗೆ ರಾಜ್ಯದಲ್ಲಿ ಸೀರತ್ ಅಭಿಯಾನದ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅಭಿಯಾನದ ಪ್ರಯುಕ್ತ ವೃದ್ಧಾಶ್ರಮ ಮತ್ತು ಅನಾಶ್ರಮಗಳಿಗೆ ಭೇಟಿ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಸಂಚಾಲಕ ಸಿ.ಎಚ್.ಅಫ್ಸರ್ ಮಾತನಾಡಿ, ಅಭಿಯಾನದ ಭಾಗವಾಗಿ ಸೆ.೨೭ರಂದು ಸಂಜೆ ೫ ಗಂಟೆಗೆ ಕುಶಾಲನಗರದಲ್ಲಿ ಎರಡು ಹೊಸ ಪುಸ್ತಕಗಳನ್ನು ಬಿಡುಗಡೆಯಾಗಲಿದೆ. ಮತ್ತು ಪುಸ್ತಕಗಳ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಜಿ.ಎಚ್.ಮುಹಮ್ಮದ್, ಮಡಿಕೇರಿ ತಾಲೂಕು ಸಂಚಾಲಕ ಎಂ.ಎಚ್.ಮುಹಮ್ಮದ್ ಮುಸ್ತಫಾ, ಸ್ಥಾನೀಯ ಸಮಿತಿ ಸದಸ್ಯ ಎಂ.ಎ.ಮುಸ್ತಫಾ ಉಸ್ಥಿತರಿದ್ದರು.