ಏಪ್ರಿಲ್ 16ರಂದು ಸಿದ್ದಾಪುರದಲ್ಲಿ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ

Apr 10, 2026 - 10:07
 0  38
ಏಪ್ರಿಲ್ 16ರಂದು ಸಿದ್ದಾಪುರದಲ್ಲಿ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ

ಸಿದ್ದಾಪುರ;ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ವತಿಯಿಂದ ಪ್ರಥಮ ವರ್ಷದ ಸೌಹಾರ್ದ ಕಪ್ ಹೊನಲು ಬೆಳಕಿನ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಏ.16 ರಂದು ಸಿದ್ದಾಪುರದ ಟರ್ಫ್ ಮೈದಾನದಲ್ಲಿ ನಡೆಯಲಿದೆ.

ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ನಿಯಮಿತದ ಸದಸ್ಯರಿಗೆ ನಡೆಯುವ ಪಂದ್ಯಾವಳಿ ಯಲ್ಲಿ 8 ತಂಡಗಳ ಭಾಗವಹಿಸುತ್ತಿದ್ದು, 82 ಪತ್ರಕರ್ತರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 75 ಸಾವಿರ ರೂಪಾಯಿವನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ 45 ಸಾವಿರ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. 

ಏ.16 ರಂದು ಸಂಜೆ 7 ಗಂಟೆಗೆ ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿರ್ದೇಶಕಿ ಬಿ.ಆರ್. ಸವಿತಾ ರೈ, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ವಿರಾಜಪೇಟೆಯ ಕಲಾವಿದೆ ಕಾಣತಂಡ ಬೀನಾ ಜಗದೀಶ್, ಕಾವೇರಿಸೇನೆ ಪ್ರಧಾನ ಕಾರ್ಯದರ್ಶಿ ಕೋಲತಂಡ ರಘು ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. 

ಅಂದು ರಾತ್ರಿ 10 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್ ಕುಮಾರ್ ಗುಹ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಸಮಾಜ ಸೇವಕರಾದ ಉದ್ಯಮಿ ಎಡಿಕೇರಿ ಪ್ರಸನ್ನ, ಮುದ್ದಂಡ ಫ್ಯಾಮಿಲಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ವಿರಾಜಪೇಟೆಯ ಉದ್ಯಮಿ ಬಿ.ಬಿ. ಚುಪ್ಪ ನಾಗರಾಜ್ ಪಾಲ್ಗೊಳ್ಳಲಿದ್ದಾರೆ.

ತಂಡಗಳ ವಿವರ: ಕೆ.ಎಂ. ಇಸ್ಮಾಯಿಲ್ ಕಂಡಕ್ಕರೆ ಮಾಲೀಕರಾಗಿ ನೌಫಲ್ ಕಡಂಗ ನಾಯಕರಾಗಿರುವ ಮೀಡಿಯಾ ಸೂಪರ್ ಕಿಂಗ್ಸ್, ಸಂತೋಷ್ ರೈ ಹಾಗೂ ಸವಿತಾ ರೈ ಮಾಲೀಕತ್ವದ ಎ.ಎಸ್. ಮುಸ್ತಫ ನಾಯಕರಾಗಿರುವ ಮೀಡಿಯಾ ರಾಯಲ್ಸ್, ಎಂ.ಎನ್ ಚಂದ್ರಮೋಹನ್ ಮಾಲೀಕರಾಗಿ ಎಚ್.ಸಿ ಜಯಪ್ರಕಾಶ್ ನಾಯಕರಾಗಿರುವ ಕಾವೇರಿ ಮೀಡಿಯಾ ಕ್ರಿಕೆಟರ್ಸ್, ಸಣ್ಣುವಂಡ ಕಿಶೋರ್ ನಾಚಪ್ಪ ಹಾಗೂ ವಿ.ವಿ. ಅರುಣ್ ಕುಮಾರ್ ಮಾಲೀಕತ್ವದ ಮಂಡೇಡ ಅಶೋಕ್ ನಾಯಕರಾಗಿರುವ ಗೋಣಿಕೊಪ್ಪ ಮೀಡಿಯಾ ಕಿಂಗ್ಸ್, ವಿರಾಜಪೇಟೆಯ ಉದ್ಯಮಿ ಪಿ.ವಿಷ್ಣು ಮಾಲಿಕತ್ವದ ಡಾ.ಹೇಮಂತ್ ಕುಮಾರ್ ನಾಯಕರಾಗಿರುವ ಟೀಮ್ ಅಯರ, ಅನಿವಾಸಿ ಭಾರತೀಯ, ಸಮಾಜ ಸೇವಕ ಎ.ಎನ್. ಪದ್ಮನಾಭ ಮಾಲೀಕತ್ವದ ಪ್ರೇಮ್ ಕುಮಾರ್ ನಾಯಕತ್ವದ ನನ್ನ ಧ್ವನಿ, ಚೈಯ್ಯಂಡ ಸತ್ಯ ಮಾಲಿಕತ್ವದ ಆದರ್ಶ್ ನಾಯಕರಾಗಿರುವ ಬ್ರಾಡ್ ಕಾಸ್ಟ್ ಇಬ್ನಿ ಬ್ಲಾಸ್ಟರ್ಸ್ , ಮಚ್ಚಮಾಡ ಅನೀಶ್ ಮಾದಪ್ಪ ಮಾಲೀಕತ್ವದ ಕುಡಿಯರ ದಿವಾಕರ್ ಬೋಜಪ್ಪ ನಾಯಕರಾಗಿರುವ ಟೀಮ್ ಕಾಫಿ ನಾಡ್ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0