Kodagu

ಪತ್ರಕರ್ತನ ಪುತ್ರಿಗೆ ಮಾಧ್ಯಮ ಸ್ಪಂದನದಿಂದ ಲ್ಯಾಪ್ ಟಾಪ್

admincoorgdaily

ಪತ್ರಕರ್ತನ ಪುತ್ರಿಗೆ ಮಾಧ್ಯಮ ಸ್ಪಂದನದಿಂದ ಲ್ಯಾಪ್ ಟಾಪ್

ಮಡಿಕೇರಿ:ಬೆಂಗಳೂರಿನಲ್ಲಿ ಬಿಎಸ್ಸಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ವಿರಾಜಪೇಟೆಯ ಪತ್ರಕರ್ತ ಎಂ.ಕೆ. ರವಿಕುಮಾರ್ ಅವರ ಪುತ್ರಿಗೆ ಮಾಧ್ಯಮ ಸ್ಪಂದನ ಮೂಲಕ 44 ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ನೀಡಲಾಗಿದೆ.

ಮಾಧ್ಯಮ ಸ್ಪಂದನ ಸದಸ್ಯ ಸಂತೋಷ್ ರೈ ಅವರ ಪ್ರಯತ್ನದಿಂದ ಬೆಂಗಳೂರಿನ ಉದ್ಯಮಿ ಲೋಕೇಶ್ ಅವರು ಲ್ಯಾಪ್ ಟಾಪ್ ಖರೀದಿಗೆ 36 ಸಾವಿರ ರೂಪಾಯಿ ನೆರವು ನೀಡಿದರು. ಉಳಿದ ಹಣವನ್ನು ಮಾಧ್ಯಮ ಸ್ಪಂದನ ಸದಸ್ಯರು ಭರಿಸಿದರು ಎಂದು ಮಾಧ್ಯಮ ಸ್ಪಂದನದ ಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ತಿಳಿಸಿದ್ದಾರೆ. 

ವಿದ್ಯಾರ್ಥಿನಿ ವಿದ್ಯಾಭ್ಯಾಸ ಸುಗಮವಾಗಿ ಸಾಗಲಿ ಎಂದು ಮಾಧ್ಯಮ ಸ್ಪಂದನ ಶುಭ ಹಾರೈಸಿದ್ದಾರೆ.