Kodagu

ಕೆ.ಬಾಡಗ: ಚಂದನಕೇರೆ ಹಾಡಿಗೆ ನೂತನ ರಸ್ತೆಗೆ ಭೂಮಿ ಪೂಜೆ: ರೂ.75 ಲಕ್ಷ ವೆಚ್ಚದಲ್ಲಿ ಕಾಮಗಾರಿ

admincoorgdaily

ಕೆ.ಬಾಡಗ: ಚಂದನಕೇರೆ ಹಾಡಿಗೆ ನೂತನ ರಸ್ತೆಗೆ ಭೂಮಿ ಪೂಜೆ:  ರೂ.75 ಲಕ್ಷ ವೆಚ್ಚದಲ್ಲಿ ಕಾಮಗಾರಿ

ಪೊನ್ನಂಪೇಟೆ: ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂದನಕೇರೆ ಹಾಡಿಗೆ ಹೋಗುವ ನೂತನ ರಸ್ತೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಸೂಚನೆಯಂತೆ, ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ರವರು ಪೂಜೆ ನೆರವೇರಿಸಿದರು.

ರೂ.75 ಲಕ್ಷ ಅನುದಾನ: ಕಾರ್ಯಕ್ರಮದ ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು, ರೂ.75 ಲಕ್ಷಗಳಲ್ಲಿ ಈ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಸ್ಥಳೀಯರ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ಶಾಸಕರಾದ ಎಎಸ್ ಪೊನ್ನಣ್ಣ ಅವರ ವಿಶೇಷ ಅನುದಾನ ಬಳಸಿ ಈ ಅನುದಾನವನ್ನು ಒದಗಿಸಿದ್ದಾರೆ" ಎಂದು ತಿಳಿಸಿದರು.

ಈ ರಸ್ತೆಯಿಂದ ಚಂದನಕೇರೆ ಹಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಚಿಮ್ಮಣ್ಣಮಾಡ ರವಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ನಾಲ್ಕೇರಿ ವಲಯ ಅಧ್ಯಕ್ಷರಾದ ತಿತೀರ ಕಟ್ಟಿ ಕಾರ್ಯಪ್ಪ, ಕೆ.ಬಾಡಗ ಪಂಚಾಯಿತಿ ಸದಸ್ಯರಾದ ಬೋಪಣ್ಣ, ಡಿಸಿಸಿ ಸದಸ್ಯರು ಹಾಗೂ ಹಿರಿಯರಾದ ನಟರಾಜ್, ಜಿಲ್ಲಾ ವಕ್ತಾರರಾದ ತೆನ್ನಿರ ಮೈನಾ* ಹಾಗೂ ಪಕ್ಷದ ಮುಖಂಡರಾದ ವಿಶು, ಮಲ್ಲಪನೇರ ನಿಲ್ಲು ಗಣಪತಿ, ಚಂಗಪ್ಪ, ಮುಕ್ಕಟೀರ ಮಧು ಮತ್ತು ಸ್ಥಳೀಯರಾದ ಸುರೇಶ್, ತಮ್ಮು, ರಘು, ಮಧು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.