Kodagu

ಕಡಂಗ;ಹಣ ಕಳೆದುಕೊಂಡ ಬೇಸರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

admincoorgdaily

ಕಡಂಗ;ಹಣ ಕಳೆದುಕೊಂಡ ಬೇಸರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಮಡಿಕೇರಿ, ಮಾ. 28: ಹಣ ಕಳೆದುಕೊಂಡ ಬೇಸರದಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

 ಕಡಂಗ ನಿವಾಸಿ ರಮೇಶ್ (67) ಎಂಬವರು ಕಡಂಗದ ಕೆನರಾ ಬ್ಯಾಂಕ್‌ನಿಂದ ರೂ. 50 ಸಾವಿರ ಡ್ರಾ ಮಾಡಿಕೊಂಡು ಆಟೋ ರಿಕ್ಷಾವೊಂದರಲ್ಲಿ ವೀರಾಜಪೇಟೆಗೆ ತೆರಳಿದ್ದು, ಈ ವೇಳೆ ಪರಿಶೀಲಿಸಿದಾಗ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಇದರಿಂದ ನೊಂದ ರಮೇಶ್ ಅವರು ಮನೆಗೆ ಹೋಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ