14 ಕೋಟಿ ವೆಚ್ಚದಲ್ಲಿ ಕಡಂಗ- ನಾಪೋಕ್ಲು- ಭಾಗಮಂಡಲ ರಸ್ತೆ ಅಭಿವೃದ್ಧಿ ಸದ್ಯದಲ್ಲಿಯೇ ಆರಂಭ
admincoorgdaily

ಮಡಿಕೇರಿ; ರಾಜ್ಯ ಹೆದ್ದಾರಿ 91 ( ಹುಣಸೂರು ತಲಕಾವೇರಿ ರಸ್ತೆ) ರಸ್ತೆಯ ಅಭಿವೃದ್ಧಿ ಕಾರ್ಯ 14 ಕೋಟಿ ವೆಚ್ಚದಲ್ಲಿ ಸದ್ಯದಲ್ಲಿಯೇ ನಡೆಯಲಿದ್ದು ಬಹುತೇಕ ಟೆಂಡರ್ ಪ್ರಕೃಯೆ ಅಂತಿಮವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಹೆದ್ದಾರಿ 91 ವ್ಯಾಪ್ತಿಗೆ ಒಳಪಡುವ ಕಂಡಂಗ, ಚೆಯ್ಯಂಡಾಣೆ, ಕಕ್ಕಬ್ಬೆ,ಕುಂಜಿಲ, ನಾಪೋಕ್ಲು, ಎಮ್ಮೆಮಾಡು, ಬಲ್ಲಮಾವಟಿ , ಅಯ್ಯಂಗೇರಿ ಭಾಗಮಂಡಲ ಭಾಗದಲ್ಲಿ ರಸ್ತೆ ಅಭಿವೃದ್ಧಿ ನಡೆಯಲಿದ್ದು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ವಿಶೇಷ ಕಾಳಜಿ ವಹಿಸಿ ಈ ರಸ್ತೆಯ ಅಭಿವೃದ್ದಿಗೆ ಕರ್ನಾಟಕ ಸರ್ಕಾರದ ರಾಜ್ಯ ಹೆದ್ದಾರಿ ಅಭಿವೃದ್ದಿ ಮತ್ತು ಮುಖ್ಯಮಂತ್ರಿಗಳ ಮೂಲ ಸೌಕರ್ಯ ಯೋಜನೆಯಡಿ ಪ್ರಥಮ ಬಾರಿಗೆ ದೊಡ್ಡ ಮೊತ್ತದ ಅನುದಾನವನ್ನು ಈ ರಸ್ತೆಗೆ ಒದಗಿಸಿದ್ದಾರೆ ಎಂದು ತೆನ್ನಿರ ಮೈನಾ ವಿವರಿಸಿದ್ದಾರೆ.