ಕಲ್ಲುಗುಂಡಿ: ರಸ್ತೆ ಅಪಘಾತದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಮಹಿಳೆ ಮೃತ್ಯು
ಸಂಪಾಜೆ: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಸಮೀಪ ಕಡೆಪಾಲ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಶೋಭಾ ಎಂಬುವವರು ಮೃತಪಟ್ಟಿದ್ದು,ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಟ್ಯಾಂಕರ್ ಮತ್ತು ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ತುತ್ತಾದ ಗಾಯಾಳುಗಳಿಗೆ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ