ಕಲ್ಲುಂಗುಂಡಿ;ಚಲಿಸುತ್ತಿದ್ದ ಆಟೋ ಮೇಲೆ ಹಲಸು ಬಿದ್ದು ಗಾಯ
ಮಡಿಕೇರಿ;ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಹಲಸಿನಹಣ್ಣು ಬಿದ್ದು ಆಟೋದ ಮೇಲ್ಬಾಗ ಜಖಂ ಗೊಂಡ ಘಟನೆ ಕಲ್ಲುಗುಂಡಿ ಬಳಿಯ ಆಟೋ ಅನಿಯಾಳದಲ್ಲಿ ಸಂಭವಿಸಿದೆ.
ಮಾ.31 ರಂದು ಸಂಜೆ ಚಾಲಕ ಅನಂತ್ ಎಂಬವರು ಆಟೋ ಚಾಲಿಸುತ್ತಿದ್ದಾಗ ರಸ್ತೆ ಬದಿ ಇದ್ದ ಮರದಿಂದ ಗಾಳಿ-ಮಳೆ ತೀವ್ರತೆಯ ಕಾರಣ ಹಣ್ಣು ನೇರವಾಗಿ ಆಟೋದ ಮೇಲೆ ಬಿದ್ದಿದೆ. ಆಟೋದಲ್ಲಿ ಚಾಲಕನೊಬ್ಬನೇ ಇದ್ದಿದ್ದು ಹಣ್ಣು ಬಿದ್ದ ಪರಿಣಾಮ ತಲೆಯ ಭಾಗಕ್ಕೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.