ಕರಾಟೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು: ಶಾಸಕ ಎ.ಎಸ್. ಪೊನ್ನಣ್ಣ
ವಿರಾಜಪೇಟೆ:ಸಮರ ಕಲೆಯು ಅತ್ಯಂತ ಪುರಾತನ ಕಲೆಯಾಗಿದೆ. ಕಲೆಯನ್ನು ಆತ್ಮರಕ್ಷಣೆಗಾಗಿ ಕಲಿಯುವುದಾಗಿದೆ. ಬಾಲ್ಯದಿಂದಲೇ ಕರಗತ ಮಾಡಿಕೊಳ್ಳಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರ್ ರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ಮೂರು ದಿನಗಳ ಕಾಲ ವಿಶೇಷ ಕರಾಟೆ ತರಬೇತಿ ಶಿಬಿರ ಆಯೋಜನೆಗೊಂಡಿತು. ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಸಮುದಾಯ ಭವನದಲ್ಲಿ ನಡೆದ ಅಂತಿಮ ದಿನದ ಶಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಶಾಸಕರು ಸಂಸ್ಕೃತಿಯೊಂದಿಗೆ ಸಮರ ಕಲೆಯು ಬೆರೆತಿದೆ.
ಪುರಾತನ ಕಾಲದಲ್ಲಿ ಆತ್ಮರಕ್ಷಣೆಗಾಗಿ,ಸಮರಾಭ್ಯಸಕ್ಕೆ ಸಮರ ಕಲೆಯನ್ನು ಸಮರ್ಥ ತರಬೇತಿದಾರರು ಸೈನಿಕರಿಗೆ ಹೇಳಿಕೊಡುತಿದ್ದರು.ಕಲೆಯು ಆತ್ಮರಕ್ಷಣೆಗಾಗಿ ಮತ್ತು ರಾಜ್ಯ ಹಾಗೂ ಪ್ರದೇಶ ರಕ್ಷಣೆಗಾಗಿ ಸೀಮಿತವಾಗಿತ್ತು. ರಾಜ್ಯಾಧಿಕಾರ ಅಂತ್ಯಗೊಂಡ ತರುವಾಯ ಸಮರಕಲೆಯ ವಿವಿಧ ಪ್ರಕಾರಗಳನ್ನು ಆಧುನಿಕ ಜನತೆ ಕಲಿಯುವ ಹಂತಕ್ಕೆ ಬಂದಿತ್ತು. ಕಲೆಯನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು ಮತ್ತು ಪ್ರೋತ್ಸಾಹ ದೊರಕುವಂತಾಗಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಗೋಜೋಕಾಯಿ ಕರಾಟೆ ತರಭೇತಿ ಶಾಲೆ ಕೊಡಗು ವಿರಾಜಪೇಟೆ ಮುಖ್ಯ ತರಬೇತಿ ಶಿಕ್ಷಕರಾದ ಸೆನ್ಸಾಯಿ ಎಂ.ಬಿ. ಚಂದ್ರನ್ ಅವರ ನೇತೃತ್ವದಲ್ಲಿ ಶ್ರೀ ರಾಮ ಟ್ರಸ್ಟ್ ಎಕ್ಸಲ್ ಶಾಲೆ ನಾಪೋಕ್ಲು , ಶ್ರೀ ಶಾಂತಮಲ್ಲಿಕಾರ್ಜುನ ವಿದ್ಯಾಪೀಠ ಅರಮೇರಿ ಮತ್ತು ಸಂತ ಅನ್ನಮ್ಮ ಶಾಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ಪ್ರಕಾರಗಳ ಕರಾಟೆ ತರಬೇತಿ ನಡೆಯಿತು. ತರಬೇತಿ ಶಿಬಿರದಲ್ಲಿ ವಿವಿಧ ಶಾಲೆಯ 350 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರದಲ್ಲಿ ಭಾರತ ಮುಖ್ಯ ಶಿಕ್ಷಕರಾದ ಸೆನ್ ಸಾಯಿ ಟಿ.ಡಿ. ಜಾನ್ಸನ್, ಸಹ ಶಿಕ್ಷಕರಾದ ಸೆನ್ ಸಾಯಿ ಮೋಹನ್ ದಾಸ್, ಪ್ರಧಾನ ತರಬೇತಿ ನೀಡಿದರು. ಶಿಬಿರದಲ್ಲಿ ಸೆಂಪಾಯಿ ಸಿ.ಹೆಚ್. ಬಷೀರ್,ಸೆಂಪಾಯಿ ಹರಿಕೃಷ್ಣನ್,ಸೆಂಪಾಯಿ ಮನೀಷ್, ಸೆಂಪಾಯಿ ಆಕಾಶ್,ಸೆಂಪಾಯಿ ಸದೀನ್, ಮತ್ತು ಸೆಂಪಾಯಿ ಪೂವಯ್ಯ ಅವರುಗಳು ಹಾಗೂ ಪೋಷಕರು ವಿವಿಧ ಶಾಲೆಯ ವಿಧ್ಯಾರ್ಥಿಗಳು ಶಿಭಿರದಲ್ಲಿ ಹಾಜರಿದ್ದರು.
ವರದಿ;ಕಿಶೋರ್ ಕುಮಾರ್ ಶೆಟ್ಟಿ