ಕಾವ್ಯಶ್ರೀ ಕಾಂತ್ ರಾಜ್ ರವರಿಗೆ ಒಲಿದ " ಕರ್ನಾಟಕ ಕನ್ನಡ ರತ್ನ " ಪ್ರಶಸ್ತಿ
admincoorgdaily

ಮಡಿಕೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾಜ್ಯೋತಿ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು, ಇವರ ಸಂಯುಕ್ತ ಆಶ್ರಯ ದಲ್ಲಿ ಇದೆ ತಿಂಗಳ 16ನೇ ತಾರೀಕು ರಾಮನಗರದ ಅಂಬೇಡ್ಕರ್ ಭವನ ದಲ್ಲಿ ನಡೆದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಕೊಡಗಿನ ಪ್ರತಿಷ್ಟಿತ ನಾಟ್ಯoಜಲಿ ನೃತ್ಯ ಸಂಸ್ಥೆಯ ಗುರು ಕಾವ್ಯಶ್ರೀ ಕಾಂತ್ ರಾಜ್ ರವರ ಹಾಗೂ ಅವರ ವಿದ್ಯಾರ್ಥಿಗಳ ಸಾಧನೆ ಯನ್ನು ಗುರುತಿಸಿ ಕರ್ನಾಟಕ ಕನ್ನಡ ರತ್ನ "ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಕಾವ್ಯಶ್ರೀ ಪ್ರಸ್ತುತ ಮಡಿಕೇರಿ ಯ ಸಂತ ಜೋಸೆಫರ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಕೆ ಅಮ್ಮತ್ತಿ ಬಿಳುಗುಂದ ಗ್ರಾಮದ ಶಿಕ್ಷಕಿ ಹೇಮಾವತಿ ಹಾಗೂ ಕಾಂತ್ ರಾಜ್ ದಂಪತಿಯ ಪುತ್ರಿ. ಮಡಿಕೇರಿ ಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ಮಾಲೀಕರಾದ ಮಹೇಶ್ ರವರ ಪತ್ನಿ.