ಪಟ್ಟೆದಾರರನ್ನು ಏಜೆಂಟರು ಎಂಬ ಪದ ಬಳಕೆ:ಕಂದಾಯ ಸಚಿವರ ಹೇಳಿಕೆಗೆ ಕೊಡಗು ಬಿಜೆಪಿ ಖಂಡನೆ

Dec 20, 2025 - 18:28
 0  365
ಪಟ್ಟೆದಾರರನ್ನು ಏಜೆಂಟರು ಎಂಬ ಪದ ಬಳಕೆ:ಕಂದಾಯ ಸಚಿವರ ಹೇಳಿಕೆಗೆ ಕೊಡಗು ಬಿಜೆಪಿ ಖಂಡನೆ

ಗೋಣಿಕೊಪ್ಪ: ಅಧಿವೇಶನದಲ್ಲಿ ಜಮ್ಮಾ ಜಾಗದಲ್ಲಿ ಪಟ್ಟೆದಾರರ ಹೆಸರಿನಲ್ಲಿ ಇರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿದೇಯಕ ಮಂಡಿಸುವಾಗ ಕಂದಾಯ ಸಚಿವರು ಪಟ್ಟೆದಾರ ಬಗ್ಗೆ ಬ್ರಿಟಿಷರ ಸೈನ್ಯಕ್ಕೆ ಸೈನಿಕರನ್ನು ಒದಗಿಸುವ ಏಜೆಂಟರು ಎಂದು ಬಳಸಿದ ಪದವನ್ನು ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲೆ ತೀವ್ರವಾಗಿ ಖಂಡಿಸಿದೆ. 

ಈ ವಿಚಾರವಾಗಿ ಮಾಧ್ಯಮದೊಂದಿಗೆ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಮಾತನಾಡಿ ಕೊಡವರಲ್ಲಿ ಅನಾಧಿ ಕಾಲದಿಂದಲು , ಪಟ್ಟೆದಾರರ ಪದ್ಧತಿ ಇದ್ದು, ಪಟ್ಟೆದಾರರನ್ನು ಪೂಜ್ಯ ಭಾವನೆಯಿಂದ ನೋಡಲಾಗುತಿತ್ತು. 

ಕೊಡವರ ಹಬ್ಬ ಹರಿದಿನಗಳಲ್ಲಿ, ಶುಭ ಸಂದರ್ಭಗಳಲ್ಲಿ ಆಯಾ ಕುಟುಂಬದ ಪಟ್ಟೆದಾರರಿಗೆ ಅತ್ಯಂತ ಗೌರವ ಸ್ಥಾನ ನೀಡುತ್ತಾ ಬಂದಿರುತ್ತದೆ.

  ಪ್ರತಿ ಕೊಡವ ಕುಟುಂಬ ತನ್ನ ಪಟ್ಟೆದಾರರಿಗೆ ಸಂಪ್ರದಾಯಕ ಗೌರವ ನೀಡುತ್ತಾ ಬಂದಿರುತ್ತದೆ. ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಪಟ್ಟೆದಾರ ವ್ಯವಸ್ಥೆ ಬಗ್ಗೆ ಗೊತ್ತಿಲ್ಲದಿದ್ದರೂ ತಾನೇ ಕಲ್ಪನೆ ಮಾಡಿಕೊಂಡು ಪಟ್ಟೆದಾರರಿಗೆ ಅವಮಾನವಾಗುವ ರೀತಿ ಮಾತನಾಡುದರ ಮೂಲಕ ಸ್ವಾಭಿಮಾನದಿಂದ ಬದುಕುತಿರುವ ಹಾಗೂ ದೇಶದ ಸೈನ್ಯಕ್ಕೆ ತನ್ನದೇ ಅದ ಕೊಡುಗೆ ನೀಡುತ್ತಾ ಬಂದಿರುವ ಕೊಡವರನ್ನು ಸಣ್ಣತನದಲ್ಲಿ ಕಂಡಿದ್ದಾರೆ 

  ಸದನದಲ್ಲಿ ಬ್ರಿಟಿಷರ ಏಜೆಂಟರು ಎಂಬ ಪದ ಬಳಸುದರ ಮೂಲಕ ರಾಜ್ಯದ ಜನರ ಮುಂದೆ ಕೊಡವರಿಗೆ ಅವಮಾನ ಮಾಡಿರುತ್ತಾರೆ. ಆದುದರಿಂದ ಕಂದಾಯ ಸಚಿವರು ಕೂಡಲೇ ಕೊಡವರಲ್ಲಿ ಕ್ಷಮೆಯಾಚಿಸಬೇಕು ಎಂದು ಕೊಡಗು ಬಿಜೆಪಿ ಅಗ್ರಹಿಸುತ್ತದೆ ಎಂದು ಹೇಳಿದರು.

ಸದನದಲ್ಲಿ ಸಚಿವರು ಮಾತನಾಡುವಾಗ ಉಪಸ್ಥಿತರಿದ್ದ ಕೊಡಗಿನ ಇಬ್ಬರು ಶಾಸಕರು ಸಚಿವರ ಬಳಸಿದ ಪದಕ್ಕೆ ಆಕ್ಷೇಪಣೆ ಸಲ್ಲಿಸದೆ ಇರುವುದನ್ನು ಸಹ ಕೊಡಗು ಬಿಜೆಪಿ ಖಂಡಿಸುತ್ತದೆ. ಹಾಗೂ ಇಬ್ಬರು ಶಾಸಕರು ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ತಿಳಿಸಬೇಕೆಂದು ಕೊಡಗು ಬಿಜೆಪಿ ಒತ್ತಾಯಿಸುತ್ತದೆ ಎಂದು ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0