ಸೆ.25ರಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ
ಮಡಿಕೇರಿ: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ ೨೦೨೪-೨೫ನೇ ಸಾಲಿನಲ್ಲಿ ೨೧.೦೮ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಗಿರೀಶ್ ಗಣಪತಿ ತಿಳಿಸಿದರು. ಸಂಘದಲ್ಲಿ ೧೮೭೯ ಸದಸ್ಯರಿದ್ದಾರೆ. ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಸಾಲ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶೇ.೯೦ ರಷ್ಟು ಸಾಲ ಮರುಪಾವತಿ ಮಾಡಲಾಗಿದೆ. ಸಂಘದಲ್ಲಿ ಒಟ್ಟು ೯೦.೨೦ ಲಕ್ಷ ಪಾಲು ಬಂಡವಾಳವಿದ್ದು, ೨೧.೦೮ ಲಕ್ಷ ಲಾಭಗಳಿಸಿದೆ ಎಂದು ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ಸೆ.೨೫ ರಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ ನಡೆಯಲಿದೆ. ಅಂದಿನ ಸಭೆಗೆ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ಯಾಮಲ, ಸಂಘದ ಮಾಜಿ ಅಧ್ಯಕ್ಷ ಕೆ.ಎಂ.ಬಿ.ಗಣೇಶ್, ನಿರ್ದೇಶಕರಾದ ಚಂದ್ರಶೇಖರ್, ಕಾಶಿ ಕಾವೇರಪ್ಪ, ಮನೀರ್ ಅಹಮ್ಮದ್ ಉಪಸ್ಥಿತರಿದ್ದರು.