ಕೊಡಗು ಪತ್ರಕತ೯ರ ಸಂಘ - ಮುಳಿಯ ಸಂಸ್ಥೆಯಿಂದ 33 ಕಲಾವಿದರ ಗಾನಸಂಭ್ರಮ ! ಮಡಿಕೇರಿಯಲ್ಲಿ ಭಾನುವಾರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು - ಗೀತಗಾಯನ
ಮಡಿಕೇರಿ ನ.20- ಕನ್ನಡದ ಮೊದಲ ನಾಡಗೀತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ ನೂರು ವಷ೯ಗಳು ತುಂಬಿರುವ ಹಿನ್ನಲೆಯಲ್ಲಿ ಕೊಡಗು ಪತ್ರಕತ೯ರ ಸಂಘದಿಂದ ಪ್ರತಿಷ್ಟಿತ ಮುಳಿಯ ಚಿನ್ನಾಭರಣ ಸಂಸ್ಥೆಯ ಸಹಯೋಗದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು - ಗೀತಗಾಯನ ಕಾಯ೯ಕ್ರಮವನ್ನು ನವಂಬರ್ 23 ರಂದು ಭಾನುವಾರ ಮಡಿಕೇರಿಯಲ್ಲಿ ಆಯೋಜಿಸಲಾಗಿದೆ. ಎಂದು ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅನಿಲ್, ನವಂಬರ್ 23 ರಂದು ಭಾನುವಾರ ಸಂಜೆ 5.30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮಕ್ಕೆ ಮುಳಿಯ ಚಿನ್ನಾಭರಣ ಸಂಸ್ಥೆ ಸಹಯೋಗ ನೀಡಿದ್ದು 3 ಗಂಟೆ ಅವಧಿಯ ಕನ್ನಡ ಗೀತೆಗಳ ಕಾಯ೯ಕ್ರಮದಲ್ಲಿ ಜಿಲ್ಲೆಯ 33 ಗಾಯಕ, ಗಾಯಕಿಯರು ಹಾಡಲಿದ್ದಾರೆ ಎಂದರು.
1924 ರಲ್ಲಿ ಕನ್ನಡದ ಹೆಸರಾಂತ ಕವಿ, ಸಾಹಿತಿ ಹುಯಿಲಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.. ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಸಮ್ಮುಖದಲ್ಲಿ ಹಾಡಲ್ಪಟ್ಟು ಕನ್ನಡದ ಮೊದಲ ನಾಡಗೀತೆ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಆ ಅಪೂವ೯ ಹಾಡಿನ ಶತಸಂಭ್ರಮವನ್ನೂ ಮಡಿಕೇರಿಯಲ್ಲಿ ಗೀತಗಾಯನಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕಾಯ೯ಕ್ರಮವನ್ನು ಪ್ರಾಯೋಗಿಕ ಕಾಯ೯ಕ್ರಮವಾಗಿ ರೂಪಿಸಿದ್ದೇವೆ. ಹೀಗಾಗಿ ಪ್ರಸ್ತುತ 33 ಕಲಾವಿದರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಿರಿಯ ಕಲಾವಿದ ಜಿ.ಚಿದ್ವಿಲಾಸ್ ಮಾಗ೯ದಶ೯ನದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತಲಿನ ಮತ್ತಷ್ಟು ಕಲಾವಿದರಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ಪ್ರಯತ್ನಕ್ಕೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮುಂದಾಗುತ್ತೇವೆ ಎಂದೂ ಅನಿಲ್ ಹೆಚ್.ಟಿ. ತಿಳಿಸಿದರು.
ಮುಳಿಯ ಚಿನ್ನಾಭರಣ ಸಂಸ್ಥೆಗಳ ಆಡಳಿತ ವಿಭಾಗದ ಮುಖ್ಯಸ್ಥ ತೀತಿಮಾಡ ಸೋಮಣ್ಣ ಮಾತನಾಡಿ, ಮುಳಿಯ ಸಂಸ್ಥೆಯು ಹಲವಾರು ವಷ೯ಗಳಿಂದ ನಾಡಿನ ಸಾಂಸ್ಕೖತಿಕ ಲೋಕಕ್ಕೆ ಅನೇಕ ಕಾಯ೯ಕ್ರಮಗಳ ಮೂಲಕ ಗಣನೀಯ ಕೊಡುಗೆ ನೀಡುತ್ತಾ ಬಂದಿದ. ಇತ್ತೀಚಿಗೆ ಬೆಂಗಳೂರಿನಲ್ಲಿ ಮುಳಿಯ ಮಳಿಗೆಯ ವಿಸ್ತರಣಾ ಕಾಯ೯ಕ್ರಮದಂದು ಒಂದೇ ದಿನ 1 ಸಾವಿರಕ್ಕಿಂತ ಹೆಚ್ಚಿನ ಗ್ರಾಹಕರು ಚಿನ್ನ, ಬೆಳ್ಳಿ ಖರೀದಿಸುವ ಮೂಲಕ ಏಕದಿನದಲ್ಲಿ ಅತ್ಯಧಿಕ ಗ್ರಾಹಕರ ವಹಿವಾಟಿಗೆ ಕಾರಣವಾದ ಭಾರತದ ಇತಿಹಾಸದಲ್ಲಿಯೇ ಈ ದಾಖಲೆ ಮಾಡಿದ ಚಿನ್ನಾಭರಣ ಸಂಸ್ಥೆ ಎಂಬ ವಿಶ್ವದಾಖಲೆಗೆ ಮುಳಿಯ ಸಂಸ್ಥೆ ಕಾರಣವಾಗಿದೆ ಎಂದರು.
ಈ ಮೊದಲು ಮುಳಿಯ ಸಂಸ್ಥಯು ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗಾನರಥ ಎಂಬ ಕಾಯ೯ಕ್ರಮ ಆಯೋಜಿಸಲಾಗಿತ್ತು. ಇದೀಗ ಉದಯವಾಗಲಿ ಎಂಬ ಕಾಯ೯ಕ್ರಮಕ್ಕೆ ಮುಳಿಯ ಸಂಸ್ಥೆಯು ಹೆಮ್ಮೆಯಿಂದ ಕೈಜೋಡಿಸಿದೆ ಎಂದೂ ಸೋಮಣ್ಣ ಹೇಳಿದರು.
ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ಮಾತನಾಡಿ, ಕನ್ನಡ ನಾಡಿನ ಸಂಸ್ಕೖತಿ, ನೆಲಜಲದ ಮಹತ್ವ ಸಾರುವ ಗಾಯನ ಕಾಯಕ್ರಮದ ಮೂಲಕ ಕನ್ನಡದ ಮಹತ್ವವನ್ನು ತಿಳಿಸುವ ಪ್ರಯತ್ನ ನಡೆಸಲಾಗಿದೆ ಎಂದರಲ್ಲದೇ, ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆ ನಿಟ್ಟಿನಲ್ಲಿ ಇಂಥ ಕಾಯ೯ಕ್ರಮಗಳನ್ನು ಮತ್ತಷ್ಟು ಹಮ್ಮಿಕೊಳ್ಳಲಿದ್ದೇವೆ ಎಂದರು.
ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರ ಟಿ.ಪಿ. ರಮೇಶ್ ಮಾತನಾಡಿ, ಈ ವಿನೂತನ ಕಾಯ೯ಕ್ರಮದ ಮೂಲಕ ಮಡಿಕೇರಿಯಲ್ಲಿ ನ.23 ರಂದು ಗಾಯನ ಲೋಕವೇ ಅನಾವರಣಗೊಳ್ಳಲಿದೆ. ಕೊಡಗು ಪತ್ರಕತ೯ರ ಸಂಘವು ಸಮಾಜಮುಖಿ ಕಾಯ೯ಕ್ರಮದೊಂದಿಗೆ ಸಾಹಿತ್ಯ,, ಸಂಸ್ಕೖತಿ ಬಿಂಬಿಸುವ ಕಾಯ೯ಕ್ರಮದ ಮೂಲಕ ಹೊಸಕಲಾವದರನ್ನು ಬೆಳಕಿಗೆ ತರುತ್ತಿದೆ ಎಂದು ನುಡಿದರು.
ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಗಾಯನ ಕಾಯ೯ಕ್ರಮದ ಮೂಲಕ ಹೆಚ್ಚಿನ ಸಾಹಿತ್ಯಾಸಕ್ತರನ್ನು ತಲುಪುವ ಕಾಯ೯ವನ್ನು ಕೊಡಗು ಪತ್ರಕತ೯ರ ಸಂಘ ಮತ್ತು ಮುಳಿಯ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಯಾರೆಲ್ಲಾ ಕಲಾವಿದರು? ಕೊಡಗು ಪೊಲೀಸ್ ಸಾಂಸ್ಕೖತಿಕ ವೇದಿಕೆಯ ಗಾಯಕರಾದ ಹೆಚ್.ವಿ.ಚಂದ್ರಶೇಖರ್, ಮಲ್ಲಪ್ಪ ಮುಸಿಗಿರಿ, ಬಸವರಾಜು, ಹೆಚ್.ಎಸ್.ಸುಧೀರ್, ಎಸ್.ಮಂಜುನಾಥ್ , ಕೆ.ಎಸ್. ಧನಂಜಯ,, ಶೋಭಾ ಶ್ರೀನಿವಾಸ್, ಮಡಿಕೇರಿಯ ಹಿರಿಯ ಗಾಯಕರಾದ ಜಿ. ಚಿದ್ವಿಲಾಸ್ , ಜಿ.ಎನ್.ಶ್ರೀಹರಿ ರಾವ್, ಸಂಧ್ಯಾ ಚಿದ್ವಿಲಾಸ್, ಚಿತ್ರಾನಂಜಪ್ಪ, ವಂದನಾ ಪೊನ್ನಪ್ಪ, ಟಿ.ಕೆ.ಸುಧೀರ್, ಪಿ.ರವಿ ಮಮತ ಆಯ೯ , ಸೋಮವಾರಪೇಟೆಯ ಎಸ್. ಎ. ಮುರಳೀಧರ್, ಜನಾಧ೯ನ್, ಶಮಿ೯ಳಾ ರಮೇಶ್, ಪುರುಷೋತ್ತಮ್, ಥೆರೆಸಾ, ಬಾಳೆಲೆಯ ಅನ್ವಿತ್ ಕುಮಾರ್ ಸಿ.ವಿ. ಮಡಿಕೇರಿಯ ಸಪ್ನ ಮಧುಕರ್ ಶೇಟ್, ಗಾಯತ್ರಿ ಚೆರಿಯಮನೆ, ಮೆಹಕ್ ಫಾತಿಮ, ಮಲಿಹ ಫಾತಿಮಾ, ಟಿ.ಜೆ. ಪ್ರವೀಣ್ ಕುಮಾರ್, ವಿರಾಜಪೇಟೆಯ ಟಿ.ಡಿ.ಮೋಹನ್, ಅಜಿತ್ ಪೂವಣ್ಣ, ಸುಪ್ರಿತಾ ದಿಲೀಪ್, ಹೇಮ, ಕುಶಾಲನಗರದ ಲೋಕೇಶ್ ಸಾಗರ್, ಮಡಿಕೇರಿಯ ವೀಣಾ ಹೊಳ್ಳ ನೇತೖತ್ವದ ಶೖತಿಲಯ ತಂಡ, ಕೆ.ಜಯಲಕ್ಷ್ಮಿ ಸಂಚಾಲಕತ್ನದ ಸಮಥ೯ ಕನ್ನಡಿಗರು ಸಂಸ್ಥೆ, ಮೇಘಾ ಭಟ್ ನಿದೇ೯ಶನದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ತಂಡದ ವಿದ್ಯಾಥಿ೯ಗಳು ಗೀತಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದಭ೯ ವೀರಾಜಪೇಟೆಯ ಕಲಾವಿದ ಬಿ.ಆರ್.ಸತೀಶ್ ಅವರಿಂದ ಚಿತ್ರಕಲೆ ಕೂಡ ರೂಪುಗೊಳ್ಳಲಿದೆ.