ಕೊಡಗು ಪತ್ರಕತ೯ರ ಸಂಘ (ರಿ)ದ ವಾಷಿ೯ಕ ಪ್ರಶಸ್ತಿ ಪ್ರಕಟ: ಅತ್ಯುತ್ತಮ ವರದಿಗಳಿಗಾಗಿ 8 ಪತ್ರಕತ೯ರಿಗೆ ಪ್ರಶಸ್ತಿ

ಕೊಡಗು ಪತ್ರಕತ೯ರ ಸಂಘ (ರಿ)ದ ವಾಷಿ೯ಕ ಪ್ರಶಸ್ತಿ ಪ್ರಕಟ: ಅತ್ಯುತ್ತಮ ವರದಿಗಳಿಗಾಗಿ  8 ಪತ್ರಕತ೯ರಿಗೆ ಪ್ರಶಸ್ತಿ

ಮಡಿಕೇರಿ;ಜೂನ್ 27 - ಕೊಡಗು ಪತ್ರಕತ೯ರ ಸಂಘ (ರಿ) ದ ವತಿಯಿಂದ ನೀಡಲಾಗುವ 2025 ನೇ ವಷ೯ದ ಅತ್ಯುತ್ತಮ ವರದಿಗಳಿಗಾಗಿನ ಪ್ರಶಸ್ತಿಗಳು ಘೋಷಣೆಯಾಗಿದೆ.

ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಅವರು ಅತ್ಯುತ್ತಮ ಮಾನವೀಯ ವರದಿಗಾಗಿ ತಮ್ಮ ಮಾತ್ರಶ್ರೀ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯು ಶಕ್ತಿ ಪತ್ರಿಕೆಯಲ್ಲಿ ಪ್ರಕಟಿತ .ನಿಸ್ವಾಥ೯ ಸೇವೆ ಮೂಲಕ ಮೂಕಪ್ರಾಣಿಗಳಿಗೆ ಆಸರೆಯಾದ ಭವಾನಿ ಎಂಬ.ಶೀಷಿ೯ಕೆಯ ವರದಿಗಾಗಿ . ಅಶ್ರಫ್ ಕರಡ . ಇವರಿಗೆ ಲಭಿಸಿದೆ.

 ಸಮಾಜಸೇವಕ ನಾಪಂಡ ಮುತ್ತಪ್ಪ ಅನರು ಮಾತ್ರಶ್ರೀ ನಾಪಂಡ ಬೋಜಮ್ಮ ಅವರ ಹೆಸರಿನಲ್ಲಿ ಸ್ಫಾಪಿಸಿರುವ ಅತ್ಯುತ್ತಮ ರಾಜಕೀಯ ವರದಿಗಾಗಿನ ದತ್ತಿ ಪ್ರಶಸ್ತಿಯು .ಸಂಯುಕ್ತಕನಾ೯ಟಕ . ಪತ್ರಿಕೆಯಲ್ಲಿ ಪ್ರಕಟವಾದ ಜನಸಂಖ್ಯೆಯೇ ಕೊಡಗು ಎಂ.ಪಿ. ಸ್ಥಾನಕ್ಕೆ ಉರಳಾಯಿತೇ ಎಂಬ ಶೀಷಿ೯ಕೆಯ ವರದಿಗಾಗಿ ಎಸ್ .ಜಿ. ಉಮೇಶ್ ಅವರಿಗೆ ಸಂದಿದೆ.

ಸಮಾಜಸೇವಕ ನಾಪಂಡ ಮುದ್ದಪ್ಪ ಅವರು ದೖಶ್ಯ ವಾಹಿನಿಯಲ್ಲಿ ಪ್ರಸಾರವಾದ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದ ಅತ್ಯುತ್ತಮ ವರದಿಗಾಗಿ ತಮ್ಮ ತಂದೆ ದಿವಂಗತ ನಾಪಂಡ ಮುತ್ತಣ್ಣ ಸ್ಮರಣಾಥ೯ ನೀಡಿರುವ ದತ್ತಿ .. ಪ್ರಶಸ್ತಿಯು ಟಿವಿ 1 ಮಾಧ್ಮಮದಲ್ಲಿ ಪ್ರಸಾರವಾದ .ಬಾರಿಕಾಡಿನಲ್ಲಿ ಹಾರಿಹೋದ ಆದಿವಾಸಿಗಳ ಸೂರು . ಶೀಷಿ೯ಕೆಯ ವರದಿಗೆ ಸಂದಿದೆ.

 ಕೊಡಗು ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಮತ್ತು ಅಂಜನ್ ಪ್ರಸಾದ್ ಅವರು ಬಿ.ಆರ್.ಶಶಿರಮ್ಮ ಮತ್ತು ಬಿ.ಟಿ. ರಾಮದಾಸ ಶೆಟ್ಟಿ ಅವರ ಜ್ಞಾಪಕಾಥ೯ ಸ್ಫಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿಗಾಗಿನ ದತ್ತಿ ಪ್ರಶಸ್ತಿಯು .ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಮೂಲಭೂತ ಸೌಕಯ೯ಗಳಿಲ್ಲದೇ ನಲಗುತ್ತಿರುವ ಮುಕ್ಕೋಡ್ಲು ಎಂಬ ಶೀಷಿ೯ಕೆಯ ವರದಿಗಾಗಿ ಕುಡೆಕಲ್ ಸಂತೋಷ್ ಇವರಿಗೆ ಸಂದಿದೆ.

ಕೊಡಗು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಅವರು ತಮ್ಮ ಪೋಷಕರಾದ ದಿ.ಮೀರಾ ಕಾಮತ್ ಮತ್ತು ದಿ ಎಂ.ಜಿ. ಪದ್ಮನಾಭ ಕಾಮತ್ ಅವರ ಹೆಸರಿನಲ್ಲಿ ಸ್ಫಾಪಿಸಿರುವ ದೖಶ್ಯ ವಾಹಿನಿಯಲ್ಲಿ ಪ್ರಸಾರವಾದ ಅತ್ಯುತ್ತಮ ಮಾನವೀಯ .. ವರದಿಗಾಗಿನ ಪ್ರಶಸ್ತಿಯು .ಕೊಡಗು ಚಾನಲ್ . ಮಾಧ್ಯಮದಲ್ಲಿ ಪ್ರಸಾರವಾದ ರಸ್ತೆಗಾಗಿ ಅಂಗಲಾಚುತ್ತಿದೆ ವಿಕಲಚೇತನ ಕುಟುಂಬ .ಶೀಷಿ೯ಕೆಯ ವರದಿಗಾಗಿ ಟಿ.ಜೆ. ಪ್ರವೀಣ್ ಕುಮಾರ್ ಅವರಿಗೆ ಸಂದಿದೆ.

ತಿಪಟೂರಿನ ಕೆ.ಎಂ.ಭಾಗೀರಥಿ ಮಹಂತೇಶ್ ಅವರು ಹಿರಿಯ ಪತ್ರಕತ೯ .ಕೆ.ಬಿ. ಮಹಂತೇಷ್ ಅವರ ಸ್ಮರಣಾಥ೯ ಸ್ಫಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗಾಗಿನ ದತ್ತಿ ಪ್ರಶಸ್ತಿಯು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಐಸ್ ಹಾಕಿಯಲ್ಲಿ ವಿದ್ಯಾಥಿ೯ನಿ ಆಯ೯ ಛಾಪು ಎಂಬ .ಶೀಷಿ೯ಕೆಯ ವರದಿಗಾಗಿ ಸೋಮವಾರಪೇಟೆಯ ಡಿ.ಪಿ.ಲೋಕೇಶ್ ಇವರಿಗೆ ಸಂದಿದೆ.

 ವಿರಾಜಪೇಟೆಯ ಸಮಾಜಸೇವಕರಾದ ಮನೆಯಪಂಡ ಕಾಂತಿ ಸತೀಶ್ ಅವರು ಅತ್ಯುತ್ತಮ ಕೖಷಿ ವರದಿಗೆ ನೀಡಿರುವ ದತ್ತಿ ನಿಧಿ ಪ್ರಶಸ್ತಿಯು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ 57 ತಳಿಯ ಭತ್ತ ನಾಟಿ - ಮಾದರಿಯಾದ ಹೊದೂರು ಗ್ರಾಮದ ರೈತ ರವಿಶಂಕರ್ ಎಂಬ .ಶೀಷಿ೯ಕೆಯ ವರದಿಗಾಗಿ ವಿನೋದ್ ಮೂಡಗದ್ದೆ ..ಇವರಿಗೆ ಸಂದಿದೆ.

ಗುಡ್ಡೆಹೂಸೂರಿನ ಹಿರಿಯ ಛಾಯಾಗ್ರಾಹಕರಾದ ಗುಡ್ಡೆಮನೆ ವಿಶುಕುಮಾರ್ ಅವರು ನೀಡುವ ಅತ್ಯುತ್ತಮ ಪರಿಣಾಮಕಾರಿ . ವರದಿಗಾಗಿನ ಪ್ರಶಸ್ತಿಯು ..ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸೂರಿಗಾಗಿ ವೃದ್ಧೆಯ ಪ್ರಾರ್ಥನೆ ಶೀಷಿ೯ಕೆಯ ವರದಿಗಾಗಿ ಸುಂಟಿಕೊಪ್ಪದ ಸುನೀಲ್ ಎಂ.ಎಸ್. ಇವರಿಗೆ ಸಂದಿದೆ.

  ಜುಲೈ 1 ರಂದು ಬುಧವಾರ ಮಡಿಕೇರಿಯ ಪತ್ರಿಕಾಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಆಯೋಜಿತ ಪತ್ರಿಕಾದಿನಾಚರಣೆ

 ಕಾಯ೯ಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನೆಲ್ಯಹುದಿಕೇರಿಯ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ, ಸಮಾಜಸೇವಕ ಸಾಬುವಗೀ೯ಸ್ , ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ . ಸಂಘದ ಜಿಲ್ಲಾಧ್ಯಕ್ಷ ಅನಿಲ್ ಹೆಚ್.ಟಿ. ಕೊಡಗು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಸಂಘದ ಖಜಾಂಚಿ ಟಿ.ಕೆ.ಸಂತೋಷ್, ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಕ್ಷೇಮಾಭಿವೖದ್ದಿ ಸಮಿತಿಯ ಅಧ್ಯಕ್ಷ ಜಿ.ವಿ. ರವಿಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ಮಾಹಿತಿ ನೀಡಿದ್ದಾರೆ.