ರಾಜ್ಯ ಹಾಕಿ ತಂಡಕ್ಕೆ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿಯರ ಆಯ್ಕೆ
ಮಡಿಕೇರಿ, ಮಾರ್ಚ್ 28: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ ಸಬ್-ಜೂನಿಯರ್ ಹಾಕಿ ರಾಜ್ಯ ಮಟ್ಟದ ಆಯ್ಕೆ ಶಿಬಿರದಲ್ಲಿ ಕೊಡಗು ವಿದ್ಯಾಲಯದ 10ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ನಿವಾಸಿ ಕನ್ನಂಡ ಕೆ ಎಂ ಪೊನ್ನಪ್ಪ ಹಾಗೂ ನಳಿನಿದಂಪತಿಯ ಪುತ್ರಿ ವರ್ಣ ಬೋಜಮ್ಮ, ನಾಪೊಕ್ಲುವಿನ ಕಲಿಯಂಡ ಬೋಪಣ್ಣ ಹಾಗೂ ನೀತು ದಂಪತಿಯ ಪುತ್ರಿ ತೇಜಲ್ ಬೋಪಣ್ಣ ಮತ್ತು ಚೆಟ್ಟಳ್ಳಿಯ ಕೆಚ್ಚೆಟ್ಟಿರ ಮೊಣ್ಣಯ್ಯ ಹಾಗು ಮುತ್ತಮ್ಮ ದಂಪತಿಯ ಪುತ್ರಿ ಲಕ್ಷ್ಯ ಪೊನ್ನಕ್ಕ ಇವರುಗಳು ಬೆಂಗಳೂರಿನ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ (KHS) ನಡೆದ ರಾಜ್ಯ ಮಟ್ಟದ ಹಾಕಿ ಕ್ರೀಡಾ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾಗಿರುತ್ತಾರೆ.
ಇವರು ಏಪ್ರಿಲ್ 1ರಿಂದ 6ರವರೆಗೆ ರಾಂಚಿಯಲ್ಲಿ ನಡೆಯಲಿರುವ ಸಬ್-ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾಲಯದ ತರಬೇತುದಾರರಾದ ದೀನ ಮತ್ತು ಪಾರ್ವತಿ ಅಭಿನಂದನೆಗಳನ್ನು ತಿಳಿಸಿದ್ದು, ಅವರ ಪರಿಶ್ರಮ ಮತ್ತು ಮಾರ್ಗದರ್ಶನವೂ ಈ ಯಶಸ್ಸಿಗೆ ಕಾರಣವಾಗಿದೆ ಎಂದು ಶಾಲಾ ಪ್ರಾಂಶುಪಾಲರು ತಿಳಿಸಿದ್ದಾರೆ.
What's Your Reaction?
Like
4
Dislike
0
Love
0
Funny
1
Angry
0
Sad
0
Wow
1
