ಕೊಡವ ತಕ್ಕ್ ಎಳ್ತ್'ಕಾರಡ ಕೂಟದಿಂದ ಡಿಸೆಂಬರ್ 30ರಂದು ರಾಜ್ಯ ಮಟ್ಟದ ಪುತ್ತರಿ ಕವಿಗೋಷ್ಠಿ

Dec 20, 2025 - 16:21
 0  67
ಕೊಡವ ತಕ್ಕ್ ಎಳ್ತ್'ಕಾರಡ ಕೂಟದಿಂದ ಡಿಸೆಂಬರ್ 30ರಂದು ರಾಜ್ಯ ಮಟ್ಟದ ಪುತ್ತರಿ ಕವಿಗೋಷ್ಠಿ

ಮಡಿಕೇರಿ:ಕೊಡವ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ 'ಕೊಡವ ತಕ್ಕ್ ಎಳ್ತ್'ಕಾರಡ ಕೂಟ'ವು ಯುವ ಪ್ರತಿಭೆಗಳು ಸೇರಿದಂತೆ ರಾಜ್ಯದ ಕೊಡವ ಭಾಷಾ ಕವಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಿಸೆಂಬರ್ ತಿಂಗಳ 30ರಂದು ವೀರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕೊಡವ ಕವಿಗೋಷ್ಠಿ ಏರ್ಪಡಿಸಲಾಗಿದೆ. 

     ಪುತ್ತರಿ ಹಬ್ಬದ ಸವಿ ನೆನಪಿಗಾಗಿ ಆಯೋಜಿಸಿರುವ ಈ ಕವಿಗೋಷ್ಠಿಯಲ್ಲಿ ಜಾತಿ, ಧರ್ಮದ ಯಾವುದೇ ನಿರ್ಭಂದವಿಲ್ಲದೆ ಎಲ್ಲರೂ ಕೊಡವ ಭಾಷೆಯಲ್ಲಿ ಕವನ ಬರೆದು ಭಾಗವಹಿಸಬಹುದು. ಆಸಕ್ತಿ ಇರುವ ಕವಿಗಳು ಡಿಸೆಂಬರ್ 25ನೆ ತಾರೀಕು ರಾತ್ರಿ 8-00 ಗಂಟೆಯ ಒಳಗೆ ಇದುವರೆಗೆ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಕವನಗಳನ್ನು 9880584732 / 9448326014 / 9449998789 ವಾಟ್ಸಪ್ ಸಂಖ್ಯೆಗಳಿಗೆ ಕಳುಹಿಸಬಹುದು. ಅಥವ ಅಧ್ಯಕ್ಷರು, ಕೊಡವ ತಕ್ಕ್ ಎಳ್ತ್'ಕಾರಡ ಕೂಟ, C/o ಕರ್ನಾಟಕ ಒನ್ ಕಛೇರಿ, ಆತ್ರೇಯ ಆಸ್ಪತ್ರೆ ಎದುರು, ವೀರಾಜಪೇಟೆ ಈ ವಿಳಾಸಕ್ಕೆ ತಲುಪಿಸಬೇಕೆಂದು ಕೂಟದ ಪ್ರಕಟಣೆಯಲ್ಲಿ ಕೋರಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0