ಕೊಡ್ಲಿಪೇಟೆ:ಬ್ಯಾಡಗೊಟ್ಟ ಗ್ರಾಮ‌ ಪಂಚಾಯಿತಿಯಲ್ಲಿ ನೂತನ ಸಂಜೀವಿನಿ ಸಭಾಂಗಣ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ

Feb 11, 2026 - 20:49
 0  142
ಕೊಡ್ಲಿಪೇಟೆ:ಬ್ಯಾಡಗೊಟ್ಟ ಗ್ರಾಮ‌ ಪಂಚಾಯಿತಿಯಲ್ಲಿ ನೂತನ ಸಂಜೀವಿನಿ ಸಭಾಂಗಣ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ

ಕೊಡ್ಲಿಪೇಟೆ : ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಸಭಾಂಗಣ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು, ಸದಸ್ಯರುಗಳು ಹೆಚ್ಚಾದಂತೆ ಸಂಘಗಳಿಗೆ ಬಲ ಬರುತ್ತದೆ.

ಬ್ಯಾಡಗೊಟ್ಟ ಪಂಚಾಯತ್ ವ್ಯಾಪ್ತಿಯಲ್ಲಿ 42 ನೊಂದಾಯಿತ ಮಹಿಳಾ ಸ್ವಸಹಾಯ ಸಂಘ ಕಾರ್ಯನಿರ್ವಹಿಸುತ್ತಿದೆ.ಒಂದೇ ಪಂಚಾಯತ್ ನಲ್ಲಿ 425 ಸದಸ್ಯರಿರುವ ಇಷ್ಟು ಸಂಘಗಳು ಇರುವುದು ಹೆಮ್ಮೆಯ ವಿಷಯ. ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸ್ವಸಹಾಯ ಸಂಘಕ್ಕೆ ಸಂಜೀವಿನಿ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ಇದರಿಂದ ಸಂಘದ ಸದಸ್ಯರುಗಳಿಗೆ ಸುರಕ್ಷೆಯಿಂದ ಸಭೆಗಳನ್ನು ನಡೆಸಬಹುದಾಗಿದೆ.

ಪಂಚಾಯತ್ ಗಳು ಸ್ವಚ್ಚತೆ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಜನರು ಕಸ ವಿಂಗಡಿಸಿ ಹಾಕುವ ಮೂಲಕ ಪಂಚಾಯತ್ ನೊಂದಿಗೆ ಸಹಕರಿಸಬೇಕು. ರಸ್ತೆ ಬದಿಯಲ್ಲಿ ಸಾರ್ವಜನಿಕವಾಗಿ ಕಸ ಹಾಕಬಾರದೆಂದು ಸಂಜೀವಿನಿ ಒಕ್ಕೂಟದ ಸದಸ್ಯರುಗಳ ಬೇಡಿಕೆಯ ಮರೆಗೆ ಚೇರ್ ಮತ್ತು ಟೇಬಲ್ ವ್ಯವಸ್ಥೆಯನ್ನು ವೈಯುಕ್ತಿಕವಾಗಿ ಮಾಡುತ್ತೇನೆಂದು ಭರವಸೆ ನೀಡಿದರು.ಪಂಚಾಯತ್ ಕಚೇರಿಯ ಆಧುನೀಕರಣ ಕಾಮಗಾರಿಗಳಿಗೆ ಶಾಸಕರ ನಿಧಿಯಿಂದ 10 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ರವರು ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂದಾಜು 17 ಲಕ್ಷ ಅನುದಾನದಲ್ಲಿ ಸಂಜೀವಿನಿ ಸಭಾಂಗಣ ನಿರ್ಮಾಣವಾಗಿರುವುದರಿಂದ ಸಭೆಗಳನ್ನು ನಡೆಸಲು ಸ್ಥಳಾವಕಾಶ ಒದಗಿಸಿದಂತಾಗಿದೆ.ಪಂಚಾಯತ್ ಆಡಳಿತ ಮಂಡಳಿಯ ಇಚ್ಚಾ ಶಕ್ತಿಯಿಂದ ಇದು ಸಾಧ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪಂಚಾಯತ್ ಸದಸ್ಯ ಹನೀಫ್ ರವರು ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾವನ ಅವರು ಮಾತನಾಡಿದರು. ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯರುಗಳಾದ ದಿನೇಶ್ ಕುಮಾರ್ ಮತ್ತು ಮೋಕ್ಷಿತ್‌ರಾಜ್ , ತಾಲೂಕು ಕೆ.ಡಿ.ಪಿ.ಸದಸ್ಯ ಡಿ.ಆರ್. ವೇದಕುಮಾರ್ ಮಾತನಾಡಿದರು.

 ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್ , ತಾಲೂಕು ಪಂಚಾಯತ್ ಸಹಾಯಕ ನಿರ್ದೆಶಕರು ಗ್ರಾಮೀಣಾ ಎ.ರಾಕೇಶ್ ,ತಾಲೂಕು ತಾಂತ್ರಿಕ ಸಂಯೋಜಕ ರಂಜಿತ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯರುಗಳಾದ ಬಿ.ಬಿ.ಸತೀಶ್ ,ಜೆ.ಎಲ್. ಜನಾರ್ದನ್, ಕೆ.ಡಿ.ಪಿ.ಸದಸ್ಯರಾದ ಶರತ್ ಶೇಖರ್ ,ಕೊಡ್ಲಿಪೇಟೆ ಕ್ರಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕ ಡಾ.ಉದಯ್ ಕುಮಾರ್ , ನಿಡ್ತ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ,ಬೆಸೂರು ಗ್ರಾಮ ಪಂಚಾಯತ್ ಅದ್ಯಕ್ಷೆ ಕಮಲಮ್ಮ ,ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯರುಗಳಾದ ಲೀನಾ ,ರೇಣುಕಾ ,ವಿನೋದಾ , ದೊಡ್ಡಯ್ಯ , ಪಂಚಾಯತ್ ಅಭಿವೃದ್ಧಿ ಆದಿಕಾರಿ ಹರೀಶ್ ಹೆಚ್.ಎಸ್, ಸಂಜಿವಿನಿ ಒಕ್ಕೂಟದ ಅದ್ಯಕ್ಷೆ ಸರೋಜಮ್ಮ, ನರೇಗಾ ಕಿರಿಯ ಅಭಿಯಂತರ ಕಿಶೋರ್ ,ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0