ಕೊಡ್ಲಿಪೇಟೆ;ಅನಧಿಕೃತವಾಗಿ ನಡೆಯುತ್ತಿದ್ದ ಇಟ್ಟಿಗೆ ಕಾರ್ಖಾನೆಗೆ ಬೀಗ

Feb 10, 2026 - 12:01
 0  783
ಕೊಡ್ಲಿಪೇಟೆ;ಅನಧಿಕೃತವಾಗಿ ನಡೆಯುತ್ತಿದ್ದ ಇಟ್ಟಿಗೆ ಕಾರ್ಖಾನೆಗೆ ಬೀಗ

ಸೋಮವಾರಪೇಟೆ; ತಾಲೂಕಿನ ಕೊಡ್ಲಿಪೇಟೆ ಹೋಬಳಿ ದೊಡ್ಡ ಕೊಡ್ಲಿಗ್ರಾಮದಲ್ಲಿ ದಿವಾಕರ, ವಿಜಯ ಹಾಗೂ ಪ್ರದೀಪ್ ರವರ ಮಾಲೀಕತ್ವದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಟ್ಟಿಗೆ ಕಾರ್ಖಾನೆಯ ಮೇಲೆ ತಹಶೀಲ್ದಾರರು ಹಿರಿಯ ಕಾರ್ಮಿಕ ನಿರೀಕ್ಷಕರು ಗ್ರಾಮ ಪಂಚಾಯಿತಿ ಅಭಿವೃದ್ಫಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖಾಧಿಕಾರಿ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಿದರು.

ಇಟ್ಟಿಗೆ ಕಾರ್ಖಾನೆಯನ್ನ ನಿರ್ವಹಿಸಲು ಯಾವುದೇ ಸ್ಥಳೀಯ ಗ್ರಾಮ ಪಂಚಾಯತಿಯ ಪರವಾನಿಗೆ ಪಡೆದಿರುವುದಿಲ್ಲ.ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಂದ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದು ಸದರಿ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ವಸತಿ ವ್ಯವಸ್ಥೆ ಯನ್ನು ಕಲ್ಪಿಸಿರುವುದಿಲ್ಲ ಯಾವುದೇ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ನೋಂದಣಿಯಾಗದೆ, ಕಾರ್ಮಿಕ ರಿಗೆ ಮೂಲಭೂತ ವ್ಯವಸ್ಥೆ ಗಳಿರುವುದಿಲ್ಲ. ಮಾನವ ಹಕ್ಕು ಉಲ್ಲಂಘನೆ ಮೇಲ್ನೋಟಕ್ಕೆ ಕಂಡು ಬಂದಿದೆ ಅಧಿಕಾರಿಗಳು ತಿಳಿಸಿದ್ದು.ಇಟ್ಟಿಗೆ ಕಾರ್ಖಾನೆಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0