ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರೋಪ ಸಮಾರಂಭ ಕಾರ್ಯಕ್ರಮ

Apr 2, 2026 - 17:36
 0  91
ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರೋಪ ಸಮಾರಂಭ ಕಾರ್ಯಕ್ರಮ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಕುಂಜಿಲ ಫೈನರಿ ದರ್ಗಾ ಷರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಗಳ ಹೆಸರಿನಲ್ಲಿ ವರ್ಷಂ ಪ್ರತಿ ನಡೆಸಿ ಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಂಡಿತು.

 ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಎಂ.ಎ.ಸೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭಕಾರ್ಯಕ್ರಮ ವನ್ನು ಮಸೀದಿಯ ಸದರ್ ಮುಅಲ್ಲಿಮ್ ಅಬ್ದುಲ್ ನಾಸಿರ್ ಲತೀಫಿ ಅವರು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಧಾರ್ಮಿಕ ಪ್ರಭಾಷಣಗಾರರಾದ ಕೇರಳದ ಹಾಫಿಜ್ ಅಹ್ಮದ್ ಕಬೀರ್ ಬಾಖವಿ ಅವರು ಧಾರ್ಮಿಕ ಪ್ರಭಾಷಣ ನಡೆಸಿ ಇಸ್ಲಾಂನ ಆಚಾರ,ವಿಚಾರ, ಆದರ್ಶ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು. ಉರೂಸ್ ಕಾರ್ಯಕ್ರಮದ ಮೂಲಕ ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭ ವಿರಾಜಪೇಟೆ ಶಾಫೀ ಜುಮಾ ಮಸೀದಿ ಅಧ್ಯಕ್ಷ ರಶೀದ್ ಹಾಜಿ, ಹಮೀದ್ ಮೌಲವಿ ಸುಂಟಿಕೊಪ್ಪ,ಮಸೀದಿಯ ಖತೀಬರಾದ ನಿಝಾರ್ ಅಹ್ಸನಿ ಕಕ್ಕಡಿ ಪುರಂ,ಜಮಾಅತ್ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್,ಕಾರ್ಯದರ್ಶಿ ಸಹೀದ್ ಪಯ್ಯಡತ್,ಕೋಶಾಧಿಕಾರಿ ಕುಂಡಂಡ ಹಂಝ,ದರ್ಸ್ ಸಮಿತಿ ಅಧ್ಯಕ್ಷ ತರ್ಮಲ್ ಹಂಝ,ಕೊಳಕೇರಿ ಜಮಾಅತ್ ಅಧ್ಯಕ್ಷ ಅಶ್ರಫ್,ಮೊಯಿದು ಬೆಟ್ಟಗೇರಿ,ವಯಕೋಲ್ ಅಹಮದ್ ಹಾಜಿ, ರಶೀದ್ ವಯಕೋಲ್, ಉಸ್ಮಾನ್ ವಯಕೋಲ್, ರಫೀಕಲಿ ಕುಂಡಂಡ, ಪಂಚಾಯತ್ ಸದಸ್ಯರಾದ ಕುಂಡಂಡ ರಜಾಕ್,ಬಷೀರ್ ಪೊಯಕ್ಕರೆ ಸೇರಿದಂತೆ ಜಮಾಅತ್ ಪದಾಧಿಕಾರಿಗಳು,ಸಲಹಾ ಸಮಿತಿ ಪದಾಧಿಕಾರಿಗಳು,ದರ್ಸ್ ಸಮಿತಿ ಪದಾಧಿಕಾರಿಗಳು, ರಿಲೀಫ್ ಸಮಿತಿ ಪದಾಧಿಕಾರಿಗಳು,ಜಮಾಅತ್ ಸರ್ವ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1