ಕುಶಾಲನಗರ: ಮಳೆಯಿಂದಾಗಿ ಮನೆಗೆ ಹಾನಿ,ಆಹಾರ ಕಿಟ್ ವಿತರಣೆ
ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಚಿಕ್ಕತ್ತೂರು ಗ್ರಾಮದ ನಿವಾಸಿಯಾದ ಮಹಾದೇವಿ ಮಳೆಯಿಂದ ಹಾನಿಯಾಗಿದ್ದು, ತಹಶೀಲ್ದಾರ್ ರವರು ಸ್ಥಳ ಪರಿಶೀಲನೆ ನಡೆಸಿದರು. ಮನೆಯ ಗೋಡೆ ಮೇಲ್ಛಾವಣಿ ಪೂರ್ಣ ಹಾನಿಯಾಗಿದ್ದು, ಮನೆಯಲ್ಲಿ ಮಹಾದೇವಿ ಮತ್ತು ಪತಿ ಕೆಂಚ ವಾಸವಿದ್ದು, ಇಬ್ಬರನ್ನು ಅವರ ಸಹೋದರನ ಮನೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಇಂದು ಆಹಾರ ಕಿಟ್ ಅನ್ನು ತಹಶೀಲ್ದಾರ್ ಅವರು ವಿತರಿಸಿದರು.