ಕುಶಾಲನಗರ : ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ; ಕೈವಾರ ತಾತಯ್ಯರ ಸಂದೇಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಲು ಕರೆ

Apr 19, 2026 - 15:00
 0  142
ಕುಶಾಲನಗರ :  ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ; ಕೈವಾರ ತಾತಯ್ಯರ ಸಂದೇಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಲು ಕರೆ

ಕುಶಾಲನಗರ : ತಾಲ್ಲೂಕಿನ ಶ್ರೀ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಕುಲಗುರು ಕೈವಾರ ತಾತಯ್ಯ ಅವರ 300 ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು.

 ಇಲ್ಲಿನ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮವನ್ನು ಅಖಿಲ ಭಾರತ ಬಲಿಜ ಸಂಘದ ಅಧ್ಯಕ್ಷ ಹೈದರಾಬಾದಿನ ಪಟೇಲ್ ಕುಂಡದೇವಯ್ಯ ಉದ್ಘಾಟಿಸಿ ಮಾತನಾಡಿ,

ಕೈವಾರ ತಾತಯ್ಯ ಅವರ ಕುರಿತು ಪ್ರವಚನ ಮಾಡಿದ ಕೈವಾರ ಕ್ಷೇತ್ರದ ಮಂಕಾಲ ಶ್ರೀ ಹರಿಶರ್ಮ ಅವರು, ಪರಹಿತಕ್ಕಾಗಿ ಜೀವಿಸಿದ ಬುದ್ದ, ಬಸವ, ಕೈವಾರ ತಾತಯ್ಯ, ಮಹಾವೀರ ಮೊದಲಾದ ಮಹಾತ್ಮರನ್ನು ಪೀಳಿಗೆಯಿಂದ ಪೀಳಿಗೆಗೆ ಜನಸಮುದಾಯ ಅರಿಯಬೇಕು ಎಂದರು.

ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷ ಎನ್.ಪಿ.ಮುನಿಕೃಷ್ಣಪ್ಪ ಮಾತನಾಡಿ,ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರೂ ತಿಳಿಯಬೇಕು.ಯಾರೊಬ್ಬರಿಗೂ ಕೆಡುಕು ನೀಡದ ಅಹಿಂಸೆಯ ಜೀವನ ಕಟ್ಟಬೇಕು ಎಂಬುದು ಪ್ರಾತಸ್ಮರಣೀಯರ ಆಶಯವಾಗಿತ್ತು ಎಂದು ಹೇಳಿದರು.

ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಆರ್.ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಲಿಜ ಸಮಾಜದ ಮಂದಿ ಒಗ್ಗೂಡಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವ ಮೂಲಕ ನಾಳೆಯ ಸತ್ಪ್ರಜೆಗಳಾಗಿ ಅವರನ್ನು ರೂಪಿಸಬೇಕು ಎಂದರು.

 ಬಲಿಜ ಸಂಘದ ಗೌರವ ಅಧ್ಯಕ್ಷ ಆರ್.ಬಾಬಣ್ಣ ಮಾತನಾಡಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ ಐದುನೂರಕ್ಕೂ ಹೆಚ್ಚಿನ ಬಲಿಜ ಕುಟುಂಬಗಳಿವೆ. ಕುಶಾಲನಗರದಲ್ಲಿ ಪ್ರತ್ಯೇಕ ಜಾಗವನ್ನು ಖರೀದಿಸಿ ಕೈವಾರ ತಾತಯ್ಯ ಅವರ ಭವನ ನಿರ್ಮಿಸುವ ಗುರಿ ಇದೆ. ಈಗಾಗಲೇ ಮೂವರು ಹಿತೈಷಿಗಳು ತಾತಯ್ಯನ ಭವನಕ್ಕೆ ಧನಸಹಾಯ ನೀಡುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕನಸು ಕೈಗೂಡಲಿದೆ ಎಂದರು.

 ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಗಣೇಶ ನಾಯ್ಡು, ಕುಶಾಲನಗರದ ಅಮರನಾರಾಯಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಸತೀಶ್, ಶಿವಮೊಗ್ಗ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ,ಬಲಿಜ ಸಮಾಜದ ಪದಾಧಿಕಾರಿಗಳಾದ ಸಿ.ಎನ್.ಮದನ್, ಟಿ.ಆರ್.ಜಗದೀಶ್, ಟಿ.ಎಸ್.ನಿರಂಜನ್, ಟಿ.ಎನ್.ಜಯರಾಮು, ಸಿ.ಜಗದೀಶ್, ಸಂಧ್ಯಾಗಣೇಶ್, ಸವಿತಾ ದಯಾನಂದ, ಮಂಜುಳಾ, ಬಾಲಸುಬ್ರಹ್ಮಣ್ಯಂ, ಉಮೇಶ್, ಕಿರಣ್, ಕುಶ, ನೂತನ್, ಟಿ.ಡಿ.ದಯಾನಂದ, ನರೇಂದ್ರ,ಎಂ.ಆರ್.ಗಣೇಶ್ ಪಾಲ್ಗೊಂಡಿದ್ದರು.

ಬಲಿಜ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಬಾಳೆಲೆ ಪ್ರತಿಭಾ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಗೀತಾ ನಾಯ್ಡು ಸ್ವಾಗತಿಸಿದರು. ಯಶ್ವಿನ್ ಬಾಲಕೃಷ್ಣ ನಾಯ್ಡು ಪ್ರಾರ್ಥಿಸಿದರು.

ಇದಕ್ಕೂ ಮೊದಲು ಬೆಳ್ಳಿ ರಥದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರ ಪ್ರತಿಷ್ಠಾಪಿಸಿ ಮುಖ್ಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಲಾಯಿತು.ಬಳಿಕ ಕುಶಾಲನಗರದ ಗಣಪತಿ ದೇವಾಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

 ಮಾಲ್ದಾರೆಯ ಮುತ್ತಪ್ಪ ಚಂಡೇ ಮೇಳ ನೋಡುಗರ ಗಮನ ಸೆಳೆಯಿತು. ಬೈಲಕೊಪ್ಪ ಹಾಗೂ ಕುಶಾಲನಗರದಲ್ಲಿ ನೆಲೆಸಿರುವ ಬಲಿಜ ಸಮಾಜದ ಬಾಂಧವರಿ ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕುಶಾಲನಗರದಲ್ಲಿ ಶನಿವಾರ ಶ್ರೀ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಏರ್ಪಡಿಸಿದ್ದ ಕುಲಗುರು ಕೈವಾರ ತಾತಯ್ಯ ಜಯಂತಿಯನ್ನು ಅಖಿಲ ಭಾರತ ಬಲಿಜ ಸಂಘದ ಅಧ್ಯಕ್ಷ ಹೈದರಾಬಾದಿನ ಪಟೇಲ್ ಕುಂಡದೇವಯ್ಯ ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷ ಎನ್.ಪಿ.ಮುನಿಕೃಷ್ಣಪ್ಪ ಉದ್ಘಾಟಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0