ಕುಶಾಲನಗರ; ಫ್ರೆಂಡ್ಸ್ ಕಪ್ ಕ್ರಿಕೆಟ್;ಯಶಸ್ವಿಯಾಗಿ ನಡೆದ ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ

Mar 24, 2026 - 13:09
 0  303
ಕುಶಾಲನಗರ; ಫ್ರೆಂಡ್ಸ್ ಕಪ್  ಕ್ರಿಕೆಟ್;ಯಶಸ್ವಿಯಾಗಿ ನಡೆದ ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ

ಕುಶಾಲನಗರ, ಮಾ.24; ಏಪ್ರಿಲ್ 11 ಮತ್ತು 12ರಂದು ನಡೆಯುವ ಫ್ರೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಕುಶಾಲಲನಗರದಲ್ಲಿ ನಡೆಯಿತು. ಒಟ್ಟು 12 ತಂಡಗಳು ಭಾಗಿಯಾಗಿದ್ದು, ಆಟಗಾರರ ಖರೀದಿಯಲ್ಲಿ ಬಹಳಷ್ಟು ಜಿದ್ದಾಜಿದ್ದಿಗೆ ಬಿದ್ದು ಆಟಗಾರರನ್ನು ತಂಡಗಳು ಖರೀದಿ ಮಾಡಿದರು.

 ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಕಾಂಗ್ರೆಸ್ ನ ಯುವ ಅಲ್ಪಸಂಖ್ಯಾತರ ಅಧ್ಯಕ್ಷರಾದ ಎಂ ಜೆ ಇರ್ಫಾನ್ ಟ್ರೋಫಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ರೀಡೆಯು ಎಲ್ಲರನ್ನೂ ಪರಸ್ಪರ ಸೇರಿಸಿ ಆತ್ಮೀಯತೆಯನ್ನು ಒಗ್ಗೂಡಿಸುತ್ತದೆ. ಫ್ರೆಂಡ್ಸ್ ಕಪ್ ಬಹಳಷ್ಟು ಅದ್ಧೂರಿಯಾಗಿ ನಡೆಯಲಿದ್ದು ತಂಡದ ಮಾಲೀಕರು ಆಟಗಾರರು ಫ್ರೆಂಡ್ಸ್ ಕಪ್ ಯಶಸ್ವಿಯಾಗಲು ಸಹಕರಿಸಬೇಕಾಗಿ ಮನವಿ ಮಾಡಿಕೊಂಡರು. ಇದೇ ಸಂದರ್ಭ ಮಣಿ, ಫಯಾಜ್, ನಾಣಿ,ಮಹದೇವ್, ಗ್ರೀನಿ,ಅವಿನಾಶ್. ಹಾಜರಿದ್ದರು. ಹರಾಜು ಪ್ರಕ್ರಿಯೆಯನ್ನು ತಂಡದ ವ್ಯವಸ್ಥಾಪಕ ದೇವೇಂದ್ರ ನೆರವೇರಿಸಿದರು.ಸಲ್ಮಾನ್ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0